alex Certify ಟಿಕ್ ​ಟಾಕ್​ ಮಾದರಿಯಲ್ಲೇ theek-thaak ಅಪ್ಲಿಕೇಶನ್​ ರೆಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿಕ್ ​ಟಾಕ್​ ಮಾದರಿಯಲ್ಲೇ theek-thaak ಅಪ್ಲಿಕೇಶನ್​ ರೆಡಿ

ಬ್ರಿಟನ್​ ಮೂಲದ ಭಾರತೀಯ ಹುಡುಗಿಯೊಬ್ಬಳು ಟಿಕ್ ಟಾಕ್​ ಮಾದರಿಯಲ್ಲೇ ವಿಡಿಯೋ ಶೇರಿಂಗ್​ ಅಪ್ಲಿಕೇಶನ್​ ಒಂದನ್ನ ಕಂಡು ಹಿಡಿದಿದ್ದಾಳೆ. ಚೀನಾ ಅಭಿವೃದ್ಧಿ ಪಡಿಸಿದ ಟಿಕ್​ ಟಾಕ್​ ಮಾದರಿಯ ಈ ಅಪ್ಲಿಕೇಶನ್​​ಗೆ theek-thaak​ ಎಂದು ಹೆಸರಿಡಲಾಗಿದೆ.

17 ವರ್ಷದ ಸೈನಾ ಸೋಧಿ ಎಂಬವರು ಈ ಅಪ್ಲಿಕೇಶನ್​ ಅಭಿವೃದ್ಧಿಪಡಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಸೈನಾ, ಟಿಕ್​ಟಾಕ್​ ಒಂದು ಶಕ್ತಿಯುತ ಸಾಮಾಜಿಕ ಜಾಲತಾಣದ ವೇದಿಕೆಯಾಗಿದೆ. ಆದರೆ ಭಾರತೀಯ ಶೈಲಿಯ ವಿಡಿಯೋ ಅಪ್ಲಿಕೇಶನ್​​ ಬರಬೇಕು ಎಂದು ನನಗನಿಸಿತು. ಹೀಗಾಗಿ ನಾನು ಈ ಅಪ್ಲಿಕೇಶನ್​​ ಕಂಡು ಹಿಡಿದೆ ಎಂದು ಹೇಳಿದ್ದಾರೆ.

ಈ ಅಪ್ಲಿಕೇಶನ್​ ಹಸಿರು, ಬಿಳಿ ಹಾಗೂ ಕೇಸರಿ ಬಣ್ಣದಲ್ಲಿದೆ. ಈ ಮೂಲಕ ಭಾರತದ ತ್ರಿವರ್ಣ ಧ್ವಜವನ್ನ ಪ್ರತಿನಿಧಿಸಲಾಗಿದೆ. ಭಾರತೀಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ಅಪ್ಲಿಕೇಶನ್​ನ್ನು ಅಭಿವೃದ್ಧಿ ಪಡಿಸಲಾಗಿದೆ. theek-thaak​ ಅನ್ನೋದು ಹಿಂದಿ ಭಾಷೆಯಾಗಿದ್ದು ಅದರ ಅರ್ಥ ಎಲ್ಲವೂ ಸರಿಯಾಗಿದೆ ಎಂದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...