ಸರಿಸೃಪ ಪ್ರಬೇಧಗಳು ಭೂಮಿಯ ಮೇಲಿನ ಆಕರ್ಷಕ ಜೀವಿಗಳಲ್ಲೊಂದು. ಪರಭಕ್ಷಕ ಜೀವಿಗಳಾದ ಸರೀಸೃಪಗಳು ಪರಿಸರ ವ್ಯವಸ್ಥೆ ಹಾಗೂ ಆಹಾರ ಜಾಲದಲ್ಲಿ ಬಹುಮುಖ್ಯ ಪಾತ್ರವನ್ನ ವಹಿಸುತ್ತವೆ.
ಸರಿಸೃಪ ಪ್ರಬೇಧ ವಿವಿಧ ಆಕಾರ ಹಾಗೂ ಗಾತ್ರದ ಜೀವಿಗಳನ್ನ ಹೊಂದಿದೆ. ಆದರೆ ಎಂದಾದರೂ ವಿಶ್ವದ ಅತಿ ಚಿಕ್ಕ ಸರಿಸೃಪ ಯಾವುದು ಅನ್ನೋದರ ಬಗ್ಗೆ ಅಧ್ಯಯನ ಮಾಡಿದ್ದೀರಾ..?
ಮಡ್ಗಾಸ್ಕರ್ನ ವಿಜ್ಞಾನಿಗಳ ತಂಡ ವಿಶ್ವದ ಅತ್ಯಂತ ಚಿಕ್ಕ ಗೋಸುಂಬೆಯನ್ನ ಪತ್ತೆ ಹಚ್ಚಿದೆ. ಇದು ವಿಶ್ವದ ಅತೀ ಚಿಕ್ಕ ಸರೀಸೃಪ ಎನ್ನಲಾಗಿದೆ.
ಈ ಗೋಸುಂಬೆಗಳು ಎಷ್ಟು ಚಿಕ್ಕದಾಗಿದೆ ಅಂದರೆ ನಿಮ್ಮ ಬೆರಳಿನ ತುತ್ತ ತುದಿಯಲ್ಲಿ ಇವುಗಳನ್ನ ಕೂರಿಸಿಕೊಳ್ಳಬಹುದಾಗಿದೆ. ವಿಜ್ಞಾನಿಗಳು ಪುಟಾಣಿ ಗಂಡು ಹಾಗೂ ಹೆಣ್ಣು ಗೋಸುಂಬೆಗಳನ್ನ ಪತ್ತೆ ಹಚ್ಚಿದ್ದು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.
ಹೆಣ್ಣು ಗೋಸುಂಬೆ ತಲೆಯಿಂದ ಬಾಲದವರೆಗೆ 29 ಮಿಲಿಮೀಟರ್ ಉದ್ದ ಹಾಗೂ ಬರೀ ದೇಹವೊಂದೇ 19 ಮಿಲಿ ಮೀಟರ್ ಉದ್ದವಿದೆ. ಇನ್ನು ಗಂಡು ಗೋಸುಂಬೆ ತಲೆಯಿಂದ ಬಾಲದವರೆಗೆ 22 ಮಿಲಿಮೀಟರ್ ಉದ್ಧ ಹಾಗೂ ದೇಹ 13.5 ಮಿಲಿಮೀಟರ್ ಹೊಂದಿದೆ.
https://www.facebook.com/101992944883628/photos/a.198900165192905/259294932486761/?type=3