ಲಿಥಿಯಮ್ ಐಯಾನ್ ಬ್ಯಾಟರಿಯಿಂದ ಕೆಲಸ ಮಾಡುವ ಜಗತ್ತಿನ ಅತ್ಯಂತ ಸುಧಾರಿತವಾದ ಕೃತಕ ಹೃದಯವನ್ನು ಅಭಿವೃದ್ಧಿಪಡಿಸಿರುವುದಾಗಿ ಫ್ರೆಂಚ್ ಕಂಪನಿಯೊಂದು ಹೇಳಿಕೊಂಡಿದೆ.
ಈ ಉತ್ಪನ್ನವನ್ನು 2021ರ ದ್ವಿತೀಯ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡುವುದಾಗಿ ಅದರ ನಿರ್ಮಾತೃ ’ಕಾರ್ಮಟ್’ ಹೇಳಿಕೊಂಡಿದೆ. ದೊಡ್ಡ ಮಟ್ಟದಲ್ಲಿ ಹೃದಯ ವೈಫಲ್ಯದಿಂದ ಬಳಲುತ್ತಿರುವ ಮಂದಿಗೆ ರಿಲೀಫ್ ಕೊಡಲು ಈ ಕಂಪನಿ ಚಿಂತನೆ ನಡೆಸಿದೆ. ’ಏಸನ್’ ಹೆಸರಿನ ಈ ಕೃತಕ ಹೃದಯವನ್ನು ತಾನು 25 ವರ್ಷಗಳಿಂದ ಅಭಿವೃದ್ಧಿಪಡಿಸುತ್ತಿರುವುದಾಗಿ ಹೇಳಿಕೊಂಡಿದೆ.
ಹೀಗೊಂದು ’ಖಾರ’ವಾದ ಗಿನ್ನೆಸ್ ದಾಖಲೆ….!
ಕೃತಕ ಹೃದಯದ ಮೇಲಿನ ಸಂಶೋಧನೆಯು 85 ವರ್ಷಗಳಿಂದಲೂ ನಡೆಯುತ್ತಿದೆ. 1937ರಲ್ಲಿ ನಾಯಿಯೊಂದಕ್ಕೆ ಕೃತಕ ಹೃದಯವನ್ನು ಹಾಕಲಾಗಿತ್ತು. 1967ರಲ್ಲಿ ಮೊದಲ ಬಾರಿಗೆ ಮಾನವನಿಗೆ ಕೃತಕ ಹೃದಯವನ್ನು ಅಳವಡಿಸಲಾಗಿತ್ತು.