ಕೊರೊನಾದಿಂದಾಗಿ ಇಡೀ ಜಗತ್ತೇ ಮಾಸ್ಕ್ ಮಯವಾಗಿದೆ. ಕೊರೊನಾಗೆ ಲಸಿಕೆಗಳು ಬಂದಿದ್ದರೂ ಸಹ ಮಾಸ್ಕ್ನ್ನ ಬಿಟ್ಟು ಹೊರಗೆ ಬರಬಹುದಾದಂತಹ ಕಾಲವೇನೂ ಬಂದಿಲ್ಲ. ಆದರೆ ಈ ಮಾಸ್ಕ್ನಿಂದಾಗಿ ನಮ್ಮ ಮುಖದ ಭಾವನೆಯನ್ನ ಹೊರಹಾಕೋದು ತುಂಬಾನೇ ಕಷ್ಟವಾಗಿದೆ. ಈ ಸಂಕಷ್ಟಕ್ಕೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಪರಿಹಾರವೊಂದನ್ನ ಹುಡುಕಿದ್ದಾರೆ.
ಕೊರೊನಾ ಹೆಸರಲ್ಲಿ ನಕಲಿ ಲಸಿಕೆ ನೀಡುತ್ತಿದ್ದ ಔಷಧಿ ಕೇಂದ್ರದ ಮೇಲೆ ದಾಳಿ..!
ಗಣರಾಜ್ಯೋತ್ಸವ ದಿನದ ಶುಭಾಶಯ ಕೋರಿದ ಅಮಿತಾಭ್ ಬಚ್ಚನ್ ಮಾಸ್ಕ್ ಬಗ್ಗೆ ಮಾತನಾಡಿದ್ರು. ಈ ಕೊರೊನಾ ಯುಗ ನಮ್ಮನ್ನ ಮಾಸ್ಕ್ಗೆ ಎಷ್ಟು ಅವಲಂಭಿತವಾಗುವಂತೆ ಮಾಡಿದೆ ಎಂದೂ ಹೇಳಿದ್ರು. ಆದರೆ ಅಮಿತಾಬ್ ಬಚ್ಚನ್ ಧರಿಸಿದ್ದ ವಿಶೇಷವಾದ ಮಾಸ್ಕ್ ಕೂಡ ಲೈಟಿಂಗ್ ವ್ಯವಸ್ಥೆ ಹೊಂದಿದ್ದು ಮುಖದ ಭಾವನೆಗೆ ತಕ್ಕಂತೆ ಲೈಟಿಂಗ್ ಕೂಡ ಬದಲಾಗ್ತಿದೆ.
https://www.instagram.com/p/CKgh5s7BaL8/?utm_source=ig_web_copy_link