ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಉಗ್ರ ಸಂಘಟನೆಯ ಕೈವಾಡವಿರುದು ದೃಢಪಟ್ಟಿದೆ. ಈ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಉಗ್ರ ಸಂಘಟನೆಯೇ ಹಂಚಿಕೊಂಡಿದೆ.
ಇಸ್ರೇಲ್ ರಾಯಭಾರ ಕಚೇರಿ ಬಳಿಯ ಸ್ಫೋಟದ ಹೊಣೆಯನ್ನು ಜೈಷ್-ಉಲ್-ಹಿಂದ್ ಎಂಬ ಉಗ್ರ ಸಂಘಟನೆ ಹೊತ್ತುಕೊಂಡಿದ್ದು, ಈ ಕುರಿತು ಟೆಲಿಗ್ರಾಂ ಚಾನಲ್ ವೊಂದರ ಜೊತೆ ಸಂಘಟನೆ ಮಾಹಿತಿ ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರೀಯ ತನಿಖಾ ದಳ ತನಿಖೆ ಚುರುಕುಗೊಳಿಸಿದೆ.
ರೋಡ್ ರೋಮಿಯೋಗಳಿಗೆ ಪೊಲೀಸರಿಂದ ಖಡಕ್ ಸಂದೇಶ ರವಾನೆ
ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಪತ್ರವೊಂದು ಪೊಲೀಸರಿಗೆ ಲಭ್ಯವಾಗಿತ್ತು. ಅದರಲ್ಲಿ ಇದು ಕೇವಲ ಟ್ರಯಲ್ ಅಷ್ಟೇ…ಎಂದು ಬರೆಯಲಾಗಿತ್ತು. ದೇಶದ ವಿವಿಧ ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಂಚನ್ನು ಉಗ್ರ ಸಂಘಟನೆ ರೂಪಿಸಿದೆ ಎನ್ನಲಾಗಿದೆ. ಇನ್ನು ಘಟನೆಯ ಹಿಂದೆ ಇರಾನ್ ಕೈವಾಡವಿರುವ ಬಗ್ಗೆಯೂ ಇಸ್ರೇಲ್ ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.