ವಿಶ್ವದಲ್ಲಿ ಕೊರೊನಾ ಭಯ , ಲಸಿಕೆಗಳ ಭರವಸೆಯ ಜೊತೆ ಜೊತೆಗೆ ಅನೇಕ ಕೊರೊನಾ ವೈರಸ್ ಸಂಬಂಧಿ ವಿಚಿತ್ರ ಘಟನೆಗಳೂ ವರದಿಯಾಗುತ್ತಾ ಇರುತ್ತವೆ. ಇಂತಹದ್ದೇ ಒಂದು ವಿಚಿತ್ರ ಪ್ರಕರಣ ಸ್ಪೇನ್ ನಿಂದ ವರದಿಯಾಗಿದೆ.
ಕೊರೊನಾದಿಂದಾಗಿ ಸ್ಪೇನ್ನಲ್ಲಿ ಓರ್ವ ಮಹಿಳೆ ಮೃತರಾಗಿದ್ದರು. ಆಸ್ಪತ್ರೆ ಸಿಬ್ಬಂದಿ ಹಾಗೂ ಕುಟುಂಬಸ್ಥರು ಕೊರೊನಾ ನಿಯಮಾವಳಿಗಳಂತೆಯೇ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ ಮೃತಳಾಗಿದ್ದಾಳೆ ಎಂದು ಭಾವಿಸಿದ ಮಹಿಳೆ ಕೆಲ ದಿನಗಳ ಬಳಿಕ ಕುಟುಂಬಸ್ಥರ ಮುಂದೆ ಬಂದು ನಿಂತಿದ್ದು ಎಲ್ಲರೂ ಶಾಕ್ ಆಗಿದ್ದಾರೆ.
ರೊಜೊಲಿಯಾ ಬ್ಲೈಂಕೋ (85) ಎಂಬಾಕೆಯನ್ನ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇವಳ ಜೊತೆಯಲ್ಲಿ ಇನ್ನೊಂದು ಮಹಿಳೆಯೂ ಇದ್ದಳು. ಆದರೆ ಸ್ವಲ್ಪ ದಿನದ ಬಳಿಕ ಅಂದರೆ ಜನವರಿ 13ರಂದು ಆಕೆ ಸತ್ತು ಹೋಗಿದ್ದಾಳೆ ಎಂದು ಆಸ್ಪತ್ರೆ ವರದಿ ನೀಡಿದೆ. ಹೀಗಾಗಿ ಮೃತದೇಹವನ್ನ ಕೊರೊನಾ ಮಾರ್ಗಸೂಚಿಯಂತೆಯೇ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇದರಲ್ಲಿ ಕುಟುಂಬಸ್ಥರು ಭಾಗಿಯಾಗಲು ಅವಕಾಶ ಇರಲಿಲ್ಲ. ಆದರೆ ಅಂತ್ಯಕ್ರಿಯೆ ನಡೆದ 10 ದಿನಗಳ ಬಳಿಕ ರೊಜೊಲಿಯಾ ಮನೆಗೆ ವಾಪಸ್ಸಾಗಿದ್ದಾಳೆ. ಈಕೆ ಮನೆಗೆ ಬಂದಿದ್ದನ್ನ ಕಂಡ ಪತಿ ಖುಷಿಯಿಂದ ಅಳೋಕೆ ಆರಂಭಿಸಿದ್ದಾರೆ.
ವಿಷಯ ಅಂದರೆ ಆಕೆಯ ರೂಮಿನಲ್ಲೇ ಇದ್ದ ಮತ್ತೊಂದು ಮಹಿಳೆ ನಿಧನಳಾಗಿದ್ದಳು. ಆದರೆ ಆಸ್ಪತ್ರೆ ನೀಡಿದ ತಪ್ಪು ಮಾಹಿತಿಯಿಂದಾಗಿ ಈ ಪ್ರಮಾದವಾಗಿದೆ.