ನಟ ನಿಖಿಲ್ ಕುಮಾರಸ್ವಾಮಿ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ನಿಖಿಲ್ ಕುಮಾರಸ್ವಾಮಿ ತಮ್ಮ ತಂದೆ, ತಾಯಿ ಹಾಗೂ ತಮ್ಮ ಪತ್ನಿಯೊಂದಿಗೆ ತಮ್ಮ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಈ ಫೋಟೋವನ್ನು ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಕೆಲ ಸಾಲುಗಳನ್ನು ಬರೆದುಕೊಂಡಿದ್ದಾರೆ.
ನನ್ನ ಮೊದಲ ದೇವರುಗಳಾದ ಅಪ್ಪ ಅಮ್ಮನ ಜೊತೆ ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ಮತ್ತೊಂದು ವಿಶೇಷ ಏನಂದ್ರೆ, ನನ್ನ ಸಂಗಾತಿಯೊಂದಿಗೆ ಇದು ನನ್ನ ಮೊದಲ ಹುಟ್ಟುಹಬ್ಬದ ಸಂಭ್ರಮ. ನನ್ನ ಹುಟ್ಟಿದ ದಿನವನ್ನ ಹಬ್ಬವನ್ನಾಗಿಸಿದ ಎಲ್ಲಾ ಪ್ರೀತಿಯ ಅಭಿಮಾನಿಗಳಿಗು ಮತ್ತು ಕಾರ್ಯಕರ್ತ ಸ್ನೇಹಿತರಿಗೂ ಅನಂತ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
https://www.instagram.com/p/CKWHn9EpF5g/?utm_source=ig_web_copy_link