alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಈ ಸ್ಥಳಕ್ಕೆ ಬರ್ತಿದ್ದಂತೆ ತಾನಾಗಿಯೇ ಕಡಿಮೆಯಾಗುತ್ತೆ ರೈಲಿನ ವೇಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…..! ಈ ಸ್ಥಳಕ್ಕೆ ಬರ್ತಿದ್ದಂತೆ ತಾನಾಗಿಯೇ ಕಡಿಮೆಯಾಗುತ್ತೆ ರೈಲಿನ ವೇಗ

ನಮ್ಮ ದೇಶದಲ್ಲಿ ಯಾವ ಪ್ರದೇಶಕ್ಕೆ ನೀವು ಹೋದರೂ ಸಹ ದೇವಾಲಯಗಳು ಕಾಣ ಸಿಕ್ಕುತ್ತವೆ. ಭಾರತದಲ್ಲಿ ಇರುವ ಲಕ್ಷಗಟ್ಟಲೇ ದೇವಾಲಯಗಳ ಹಿಂದೆ ಒಂದಿಲ್ಲೊಂದು ವಿಶೇಷವಾದ ಕತೆಯಂತೂ ಇದ್ದೇ ಇರುತ್ತೆ.

ಶ್ರೀ ಸಿದ್ದವೀರ ಹನುಮಾನ ಮಂದಿರ ಹೆಚ್ಚಾಗಿ ಹನುಮ ದೇವಸ್ಥಾನ ಅಂತಾನೇ ಫೇಮಸ್​ ಆಗಿದೆ. ಮಧ್ಯ ಪ್ರದೇಶದ ಶಾದಾಯಿ ಜಿಲ್ಲೆಯ ಬೊಲಾಯಿ ಎಂಬ ಗ್ರಾಮದಲ್ಲಿ ಈ ದೇವಸ್ಥಾನ ಇದೆ.

ನಿಮಗೆ ಕೇಳೋಕೆ ವಿಚಿತ್ರ ಅನಿಸಬಹುದು. ಆದರೆ ಸತ್ಯವಾದ ವಿಚಾರ ಏನು ಅಂದರೆ ರೈಲು ಹಳಿಗಳ ಮೇಲೆ ಎಷ್ಟೇ ವೇಗದಲ್ಲಿ ಹೋಗ್ತಾ ಇದ್ದರೂ ಸಹ ಈ ದೇವಸ್ಥಾನದ ಸಮೀಪದಲ್ಲಿ ಹಾದು ಹೋಗುವಾಗ ಅದರ ವೇಗ ತನ್ನಿಂದ ತಾನೇ ಕಡಿಮೆಯಾಗುತ್ತಂತೆ.

ಇನ್ನು ರೈಲ್ವೆ ಚಾಲಕರು ಹೇಳುವಂತೆ, ಅವರಿಗೆ ಈ ದೇವಸ್ಥಾನದ ಬಳಿಗೆ ಬಂದಾಗ ಯಾರೋ ರೈಲಿನ ವೇಗವನ್ನ ಕಡಿಮೆ ಮಾಡು ಎಂದು ಹೇಳಿದಂತೆ ಭಾಸವಾಗುತ್ತಂತೆ. ಇನ್ನೊಂದು ವಿಚಾರ ಅಂದರೆ ಈ ಸ್ಥಳದಲ್ಲಿ ರೈಲು ನಿಧಾನವಾಗಿ ಚಲಿಸಿದ್ದರೂ ಸಹ ಎಂದಿಗೂ ತಾಂತ್ರಿಕ ದೋಷದಿಂದ ರೈಲು ಈ ಸ್ಥಳದಲ್ಲಿ ನಿಂತಿದ್ದಿಲ್ಲ ಹಾಗೂ ಇಲ್ಲಿಯವರೆಗೆ ಈ ಪ್ರದೇಶದಲ್ಲಿ ಒಂದೇ ಒಂದು ರೈಲು ಅಪಘಾತ ಸಂಭವಿಸಿದ್ದನ್ನ ನಾವು ಕಂಡೇ ಇಲ್ಲ ಅಂತಾರೆ ಸ್ಥಳೀಯರು.

ಈ ದೇವಸ್ಥಾನ ಬರೋಬ್ಬರಿ 600 ವರ್ಷ ಹಳೆಯದಾಗಿದ್ದು ಪ್ರವಾಸಿಗರ ಆಕರ್ಷಣೀಯ ಕೇಂದ್ರಗಳಲ್ಲಿ ಒಂದಾಗಿದೆ. ಈ ದೇವಸ್ಥಾನದ ಹನುಮಂತ ಹಾಗೂ ಗಣಪತಿಯ ವಿಗ್ರಹಗಳು ಅಕ್ಕಪಕ್ಕದಲ್ಲೇ ಇದೆ. ಎರಡೆರಡು ದೇವರು ಒಟ್ಟಿಗೇ ಇರೋದ್ರಿಂದ ಈ ಸ್ಥಳ ಇಷ್ಟೊಂದು ಪುಣ್ಯವನ್ನ ಸಂಪಾದಿಸಿದೆ ಅನ್ನೋದು ಸ್ಥಳೀಯರ ನಂಬಿಕೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...