alex Certify ತಾಂಡವ್‌ ವಿವಾದ: ಅಮೆಜಾನ್ ವಿರುದ್ಧ ’ಜೂತೇ ಮಾರೋ’ ಅಭಿಯಾನ ಕೈಗೊಳ್ಳಲು ಮುಂದಾದ ಬಿಜೆಪಿ ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂಡವ್‌ ವಿವಾದ: ಅಮೆಜಾನ್ ವಿರುದ್ಧ ’ಜೂತೇ ಮಾರೋ’ ಅಭಿಯಾನ ಕೈಗೊಳ್ಳಲು ಮುಂದಾದ ಬಿಜೆಪಿ ನಾಯಕ

BJP Leader Plans 'Joote Maro' Movement Against Amazon As Tandav Row Heats Up

ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಬಲವಾದ ಆರೋಪ ಎದುರಿಸುತ್ತಿರುವ ವೆಬ್ ಸೀರೀಸ್‌ ’ತಾಂಡವ್‌’ ವಿರುದ್ಧ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ.

ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್‌, ಡಿನೋ ಮಾರಿಯಾ, ಕುಮುದ್ ಮಿಶ್ರಾ, ಜೀಶನ್ ಅಯ್ಯುಬ್, ಗೌಹಾರ್‌ ಖಾನ್ ಹಾಗೂ ಕೃತಿಕಾ ಕಾಮ್ರಾ ಅಭಿನಯದ ಈ ವೆಬ್‌ ಸೀರೀಸ್‌ನ ನಿದೇಶಕ ಅಲಿ ಅಬ್ಬಾಸ್ ಜಾಫರ್‌ ಹಾಗೂ ಬರಹಗಾರ ಗೌರವ್ ಸೋಲಂಕಿ ವಿರುದ್ಧ ಲಖನೌನ ಹಜರತ್‌ಗಂಜ್ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ವೆಬ್‌ ಸೀರೀಸ್‌ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಬಿಜೆಪಿಯ ಇಬ್ಬರು ನಾಯಕರು ಆರೋಪಿಸಿದ್ದಾರೆ. ಇವರಲ್ಲಿ ಒಬ್ಬರಾದ ರಾಮ್ ಕದಮ್‌, ಮುಂಬಯಿಯ ಘಾಟ್ಕೋಪರ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ದಾಖಲಿಸಿದ್ದು, ಸೋಮವಾರದಿಂದ ’ಜೂತೆ ಮಾರೋ’ (ಚಪ್ಪಲಿಯಲ್ಲಿ ಹೊಡೆಯಿರಿ) ಅಭಿಯಾನಕ್ಕೆ ಚಾಲನೆ ಕೊಡುವುದಾಗಿ ತಿಳಿಸಿದ್ದಾರೆ.

“24 ಗಂಟೆಗಳು ಕಳೆದರೂ ಅಮೆಜಾನ್‌ನಿಂದ ಇನ್ನೂ ಒಂದೇ ಒಂದು ಕ್ಷಮಾಪಣೆ ಕೇಳಿ ಬಂದಿಲ್ಲ. ನಮ್ಮ ಹಿಂದೂ ದೇವತೆಗಳನ್ನು ಅವಮಾನಿಸುವುದು ಅವರಿಗೆ ಹೆಮ್ಮೆಯ ಸಂಗತಿ ಎಂದು ತೋರುತ್ತದೆ. ಶಾಪಿಂಗ್ ಸೈಟ್ ಇರಲಿ, ಕಂಟೆಂಟ್ ಪ್ಲಾಟ್‌ಫಾರಂ ಇರಲಿ, ಅಮೆಜಾನ್‌ನ ಎಲ್ಲ ಉತ್ಪನ್ನಗಳನ್ನೂ ನಿಷೇಧಿಸಲು ನಾನು ಹಿಂದೂಗಳಿಗೆ ಮನವಿ ಮಾಡುತ್ತೇನೆ” ಎಂದು ರಾಮ್ ಕದಮ್ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

“ತನ್ನ ಪ್ಲಾಟ್‌ಫಾರಂನಿಂದ ತಾಂಡವ್‌ ವೆಬ್‌ ಸೀರೀಸ್ ‌ಅನ್ನು ತೆರವುಗೊಳಿಸುವವರೆಗೂ ಹಿಂದೂಗಳು ಅಮೆಜಾನ್‌ನಿಂದ ಏನನ್ನೂ ಖರೀದಿ ಮಾಡಬಾರದು. ನಮ್ಮ ಧರ್ಮವನ್ನು ಅಣಕ ಮಾಡಿದ ಜನರಿಗೆ ಶಿಕ್ಷೆಯಾಗಬೇಕು. ನಾವೀಗ ತಾಳ್ಮೆಯಿಂದ ಅಲ್ಲ, ಶೂಗಳಿಂದ ಅವರಿಗೆ ಉತ್ತರ ಕೊಡುತ್ತೇವೆ” ಎಂದು ಕದಮ್ ಸಿಟ್ಟು ವ್ಯಕ್ತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...