alex Certify ವೈದ್ಯ ಮಾಡಿದ ಕೆಲಸ ಕಂಡು ದಂಗಾದ ಅಧಿಕಾರಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯ ಮಾಡಿದ ಕೆಲಸ ಕಂಡು ದಂಗಾದ ಅಧಿಕಾರಿಗಳು….!

ಮಗಳನ್ನು ವೈದ್ಯೆಯನ್ನಾಗಿ ಮಾಡಬೇಕೆಂಬ ಕಾರಣಕ್ಕೆ ಸ್ವತಃ ದಂತ ವೈದ್ಯನಾಗಿರುವ ಆಕೆಯ ತಂದೆ ಮಾಡಿರುವ ಕೆಲಸ ಕಂಡು ಅಧಿಕಾರಿಗಳು ದಂಗು ಬಡಿದಿದ್ದಾರೆ. ಇದೀಗ ಅಂತಹ ಕೆಲಸ ಮಾಡಿದ 47 ವರ್ಷದ ದಂತ ವೈದ್ಯ ಜೈಲು ಪಾಲಾಗಿದ್ದಾನೆ.

ಹೌದು, ಇಂತಹುದೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ರಾಮನಾಥಪುರಂ ಜಿಲ್ಲೆಯ ಬಾಲಚಂದ್ರನ್ ಎಂಬಾತ ನೀಟ್ ಪರೀಕ್ಷೆಯಲ್ಲಿ ತನ್ನ ಮಗಳು ಪಡೆದ ಅಂಕಗಳನ್ನು ತಿದ್ದಿದ್ದಾನೆ. ಅಷ್ಟೇ ಅಲ್ಲ ಮೆಡಿಕಲ್ ಕೌನ್ಸಲಿಂಗ್ ಆಹ್ವಾನ ಪತ್ರವನ್ನು ಕೂಡ ಮಾರ್ಪಡಿಸಿದ್ದಾನೆ.

ಕೌನ್ಸೆಲಿಂಗ್ ಗೆ ಪುತ್ರಿಯೊಂದಿಗೆ ದಂತವೈದ್ಯ ಬಾಲಚಂದ್ರನ್ ಹೋದ ವೇಳೆ, ಅಧಿಕಾರಿಗಳು ಅಂಕಗಳನ್ನು ತಾಳೆ ಹಾಕಿದ್ದಾರೆ. ಈ ವೇಳೆ ವ್ಯತ್ಯಾಸ ಬಂದಿದ್ದು, ವಿಚಾರಣೆ ನಡೆಸಿದಾಗ ದಂತವೈದ್ಯ ಮಾಡಿದ ಕೃತ್ಯ ಬಯಲಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿ ಆರೋಪಿಯನ್ನು ಜೈಲಿಗೆ ಕಳುಹಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...