alex Certify BIG NEWS: ‘ವರ್ಕ್ ಫ್ರಂ ಹೋಮ್’ ನೌಕರರಿಗೆ ಬದಲಾಗಲಿದೆ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ವರ್ಕ್ ಫ್ರಂ ಹೋಮ್’ ನೌಕರರಿಗೆ ಬದಲಾಗಲಿದೆ ನಿಯಮ

ಕೊರೊನಾ ವೈರಸ್, ಕಚೇರಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಕೊರೊನಾದಿಂದಾಗಿ ಮನೆಯಲ್ಲಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕಾರ್ಮಿಕ ಸಚಿವಾಲಯ ಈಗ ಹೊಸ ಕರಡನ್ನು ಸಿದ್ಧಪಡಿಸಿದೆ. ಈ ಕರಡಿನಲ್ಲಿ ಕೆಲಸಗಾರರು ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಆಯ್ದುಕೊಳ್ಳುವ ಅವಕಾಶ ನೀಡುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಹೊಸ ಕರಡಿನಲ್ಲಿ ಗಣಿಗಾರಿಕೆ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳ ನೌಕರರನ್ನು ಸೇರಿಸಲಾಗಿದೆ. ಐಟಿ ವಲಯಕ್ಕೆ ಹೆಚ್ಚಿನ ಪ್ರಯೋಜನ ಸಿಗುವ ಸಾಧ್ಯತೆಯಿದೆ. ಐಟಿ ಉದ್ಯೋಗಿಗಳ ಕೆಲಸದ ಸಮಯವನ್ನು ಕಡಿತಗೊಳಿಸುವ ಸಂಭವವಿದೆ. ನೌಕರರ ಸುರಕ್ಷತೆಗೂ ಕರಡಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸೇವಾ ಕ್ಷೇತ್ರದ ಅಗತ್ಯತೆಗಾಗಿ ಮೊದಲ ಬಾರಿ ಪ್ರತ್ಯೇಕ ಕರಡು ಸಿದ್ಧವಾಗಿದೆ. ಹೊಸ ಕರಡಿನಲ್ಲಿ ಎಲ್ಲಾ ಕಾರ್ಮಿಕರಿಗೆ ರೈಲು ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಈ ಸೌಲಭ್ಯ ಗಣಿಗಾರಿಕೆ ಕ್ಷೇತ್ರದ ಕಾರ್ಮಿಕರಿಗೆ ಮಾತ್ರ ಲಭ್ಯವಿತ್ತು. ಈ ಬಗ್ಗೆ ಕಾರ್ಮಿಕ ಸಚಿವಾಲಯವು ಸಾಮಾನ್ಯ ಜನರಿಂದ ಸಲಹೆಗಳನ್ನು ಕೋರಿದೆ. ಸಲಹೆಯನ್ನು 30 ದಿನಗಳಲ್ಲಿ ಕಾರ್ಮಿಕ ಸಚಿವಾಲಯಕ್ಕೆ ಕಳುಹಿಸಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...