ಬಾಂಗ್ಲಾದೇಶದಲ್ಲಿ ವಾಸವಿರುದ ಕುಟುಂಬದ ನಾಲ್ಕು ತಲೆಮಾರಿನ ಸದಸ್ಯರು ಮೃದುವಾದ ಹಸ್ತವನ್ನ ಹೊಂದಿದ್ದು ಇವರಿಗೆ ಬೆರಳಚ್ಚೇ ಮೂಡಿಲ್ಲವಂತೆ. ಈ ಅಪರೂಪದ ಸ್ಥಿತಿಯನ್ನ ವೈಜ್ಞಾನಿಕ ಭಾಷೆಯಲ್ಲಿ ಅಡೆರ್ಮಟೊಗ್ಲಿಫಿಯಾ ಎಂದು ಕರೆಯಲಾಗುತ್ತೆ. ಬಾಂಗ್ಲಾ ದೇಶದ ಸರ್ಕಾರಿ ಸೌಲಭ್ಯಗಳು ಹಾಗೂ ದಾಖಲಾತಿಗೆ ಬೆರಳಚ್ಚಿನ ಅವಶ್ಯಕತೆ ಅನಿವಾರ್ಯವಾದ್ದರಿಂದ ಈ ಕುಟುಂಬಕ್ಕೆ ಸಂಕಷ್ಟ ಉಂಟಾಗಿದೆ.
22 ವರ್ಷದ ಅಪು ಸರ್ಕಾರ್ ಹಾಗೂ ಅವರ ತಂದೆ ಅಮಲ್ ಸರ್ಕಾರ್ ಬಾಂಗ್ಲಾದೇಶ ಉತ್ತರ ಜಿಲ್ಲೆಯ ರಾಜ್ ಶಾಹಿ ನಿವಾಸಿಗಳಾಗಿದ್ದಾರೆ. ಇವರ ತಾತನ ಕಾಲದಿಂದಲೇ ಈ ಕುಟುಂಬದ ಯಾರಿಗೂ ಬೆರಳಚ್ಚೇ ಮೂಡಿಲ್ಲವಂತೆ. ಇಲ್ಲಿಯವರೆಗೆ ಅವರಿಗೆ ಈ ಕಾರಣದಿಂದ ಯಾವುದೇ ತೊಡಕು ಉಂಟಾಗಿಲ್ಲವಂತೆ.
ಆದರೆ ಬಯೋಮೆಟ್ರಿಕ್ ನ್ನು ಬಳಕೆ ಮಾಡಲು ಆಗೋದೇ ಇಲ್ಲ ಅಂತಾ ಕುಟುಂಬ ಸದಸ್ಯರಾದ ಅಪು ಹಾಗು ಅನು ಬೇಸರ ವ್ಯಕ್ತಪಡಿಸಿದ್ರು.
ಅಡೆರ್ಮಟೊಗ್ಲಿಫಿಯಾ ಸಮಸ್ಯೆ ಹೊಂದಿರುವ ವ್ಯಕ್ತಿಗಳು ಬೆರಳಚ್ಚನ್ನ ಹೊಂದಿರೋದಿಲ್ಲ. ಕುಟುಂಬದ ಈ ಸಮಸ್ಯೆಯನ್ನ ಸರ್ಕಾರಿ ಅಧಿಕಾರಿಗಳಿಗೆ ತಿಳಿಸಲಾಗಿದ್ದು ಕುಟುಂಬ ಸದಸ್ಯರ ರೆಟಿನಾ ಹಾಗೂ ಮುಖ ಸ್ಕ್ಯಾನ್ ಮಾಡುವ ಮೂಲಕ ಇವರಿಗೆ ಬಯೋಮೆಟ್ರಿಕ್ ಡಾಟಾ ಐಡಿಯನ್ನ ನೀಡಲಾಗುತ್ತಿದೆಯಂತೆ.