ರೈತರ ಪ್ರತಿಭಟನೆಗೆ ಕಾರಣವಾಗಿರುವ ಕೃಷಿ ಮಸೂದೆಯನ್ನ ವಿರೋಧಿಸಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿ ಕೂಟದಿಂದ ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷ ಹೊರಬಿದ್ದಿದೆ. ಈ ಬಗ್ಗೆ ಆರ್ಎಲ್ಪಿ ಸಂಸ್ಥಾಪಕ ಹಾಗೂ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಅಧಿಕೃತ ಮಾಹಿತಿ ನೀಡಿದ್ದಾರೆ.
ರೈತರ ವಿರುದ್ಧ ಇರುವ ಯಾರೊಂದಿಗೂ ನಾವು ನಿಲ್ಲೋದಿಲ್ಲ ಎಂದು ಸಂಸದ ಬೇನಿವಾಲ್ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾನ್ಪುರ – ಖೇಡಾ ಗಡಿಯಲ್ಲಿ ರೈತರನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
2018ರಲ್ಲಿ ಬಿಜೆಪಿಯನ್ನ ತೊರೆದಿದ್ದ ಬೆನಿವಾಲ್ ಬಳಿಕ ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷವನ್ನ ರಾಜಸ್ಥಾನದಲ್ಲಿ ಪ್ರಾರಂಭಿಸಿದ್ದರು. 2019ರ ಸಾರ್ವತ್ರಿಕ ಚುನಾವಣೆಗೂ ಮುಂಚೆ ಬಿಜೆಪಿ ಜೊತೆ ಆರ್ಎಲ್ಪಿ ಕೈ ಜೋಡಿಸಿತ್ತು. ಆದರೆ ಕೃಷಿ ಕಾನೂನನ್ನ ಹಿಂಪಡೆಯದೇ ಇದ್ದರೆ ಬೆಂಬಲ ಹಿಂಪಡೆಯೋದಾಗಿ ವಾರದ ಹಿಂದೆಯೇ ಎನ್ಡಿಎ ಮೈತ್ರಿಕೂಟಕ್ಕೆ ಎಚ್ಚರಿಕೆ ನೀಡಿತ್ತು. ಅದರಂತೆ ತನ್ನ ಬೆಂಬಲವನ್ನ ವಾಪಸ್ ಪಡೆದಿದೆ.