ಈ ಹಾಲಿಡೇ ಸೀಸನ್‌ನಲ್ಲಿ ಹೋಂ ಸಿಕ್‌ನೆಸ್‌ನಿಂದ ಬಳಲುತ್ತಿರುವ ಮಂದಿಗೆ ಬಾಟಲಿಯಲ್ಲಿ ತುಂಬಿದ ಗಾಳಿಯನ್ನು ಕಂಪನಿಯೊಂದು ಮಾರಾಟ ಮಾಡುತ್ತಿದೆ.
ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ ತಂತಮ್ಮ ಸ್ವದೇಶಗಳಿಗೆ ಮರಳಿ ಹೋಗಲು ಸಾಧ್ಯವಾಗದೇ ಇರುವ ಜನರಿಗೆ ಎಂದು ಮೈಬ್ಯಾಗೇಜ್ ಎಂಬ ಕಂಪನಿಯು ಈ ವ್ಯವಸ್ಥೆ ಜಾರಿಗೆ ತಂದಿದೆ. ವಾಸನೆ ಗ್ರಹಿಸುವ ಸಾಮರ್ಥ್ಯದೊಂದಿಗೆ ಭಾವನಾತ್ಮಕತೆಗೆ ಇರುವ ಸಂಬಂಧವನ್ನು ಅಧ್ಯಯನ ಮಾಡಿದ ಈ ಸಂಸ್ಥೆ ಹೀಗೆ ಮಾಡಿದೆ.
ಬ್ರಿಟನ್ ಮೂಲದ ಕಂಪನಿಯು 500 ಮಿಲೀ ಬಾಟಲಿಗಳಲ್ಲಿ ಗಾಳಿಯನ್ನು ತುಂಬಿ, ಅವಕ್ಕೆ ಕಾರ್ಕ್‌ನಿಂದ ಮುಚ್ಚಿ ಮಾರಾಟ ಮಾಡುತ್ತಿದೆ. ಇಂಗ್ಲೆಂಡ್, ಸ್ಕಾಟ್ಲೆಂಡ್ ಐರ್ಲೆಂಡ್ ಹಾಗೂ ವೇಲ್ಸ್ ಪ್ರದೇಶಗಳಿಂದ ಗಾಳಿಯನ್ನು ಸೆರೆ ಹಿಡಿದು ಈ ಬಾಟಲಿಯಲ್ಲಿ ತುಂಬಲಾಗಿದೆ. ಪ್ರತಿ ಬಾಟಲಿಗೆ 25 ಪೌಂಡ್ (2,496 ರೂ.) ಬೆಲೆ ಇದ್ದು, ಇದನ್ನು ಖರೀದಿ ಮಾಡುವವರು ತಂತಮ್ಮ ಊರುಗಳ ಗಾಳಿಯನ್ನು ತಾವಿರುವ ಊರುಗಳಲ್ಲೇ ಸವಿಯಬಹುದಾಗಿದೆ.