2021ರಲ್ಲಿ ಒಲಿಂಪಿಕ್ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳು ಹಾಗೂ ತರಬೇತುದಾರನ್ನೂ ಕೊರೊನಾ ಲಸಿಕೆ ಆದ್ಯತೆಯ ಗುಂಪಿಗೆ ಸೇರಿಸಬೇಕೆಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.
ಬಿಜೆಪಿ ಸಂಸದ ವಿನಯ್ ಸಹಸ್ರಬುದ್ದೆ ನೇತೃತ್ವದ ಶಿಕ್ಷಣ, ಮಹಿಳೆಯರು. ಮಕ್ಕಳು, ಯುವ ಮತ್ತು ಕ್ರೀಡೆ ಕುರಿತ ಸ್ಥಾಯಿ ಸಮಿತಿಯು ರಾಜ್ಯ ಸಭಾ ಅಧ್ಯಕ್ಷ ವೆಂಕಯ್ಯನಾಯ್ಡುಗೆ ಸಲ್ಲಿಸಿದ ಒಲಿಂಪಿಕ್ 2021ರ ತಯಾರಿ ಕುರಿತ ವರದಿಯಲ್ಲಿ ಈ ವಿಚಾರವನ್ನ ಉಲ್ಲೇಖಿಸಲಾಗಿದೆ.
ಸಾಂಕ್ರಾಮಿಕ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನ ಕೈಗೊಳ್ಳೋದು ಅನಿವಾರ್ಯವಾಗಿರಲಿದೆ ಎಂದು ಸಮಿತಿ ವರದಿಯಲ್ಲಿ ಹೇಳಿದೆ. ಅಲ್ಲದೇ ತರಬೇತಿ ಸೌಕರ್ಯಗಳನ್ನ ಕ್ರೀಡಾಪಟುಗಳಿಗೆ ಮತ್ತೆ ತೆರೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.