ಸಾಮಾಜಿಕ ಜಾಲತಾಣದ ನೆರವಿನಿಂದ ರಾತ್ರೋ ರಾತ್ರಿ ಫೇಮಸ್ ಆಗಿದ್ದ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್ಗೆ ಬೆದರಿಕೆ ಕರೆಗಳು ಬರೋಕೆ ಶುರುವಾಗಿದೆ. ಬೆದರಿಕೆ ಕರೆಗಳಿಂದಾಗಿ ಮನೆಯಿಂದ ಹೊರ ಬರೋಕೂ ಭಯವಾಗ್ತಿದೆ ಅಂತಾ ವೃದ್ಧ ಕಾಂತಾ ಪ್ರಸಾದ್ ಅಳಲನ್ನ ತೋಡಿಕೊಂಡಿದ್ದಾರೆ.
ಕೆಲವರು ತಮ್ಮ ಉಪಹಾರ ಗೃಹಕ್ಕೆ ಬೆಂಕಿ ಹಚ್ಚೋದಾಗಿ ಬೆದರಿಕೆ ಒಡ್ಡಿದ್ದಾರೆ ಅಂತಾ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್ ಆರೋಪಿಸಿದ್ದಾರೆ. ಇನ್ನು ಈ ಸಂಬಂಧ ಮಾತನಾಡಿದ ಕಾಂತಾ ಪ್ರಸಾದ್ ಪರ ವಕೀಲ ಪ್ರೇಮ್ ಜೋಶಿ ಇದು ಯುಟ್ಯೂಬರ್ ಗೌರವ್ ವಾಸನ್ರ ಕೃತ್ಯ ಇರಬಹುದು ಎಂದು ಶಂಕಿಸಿದ್ದಾರೆ.
ಬೆದರಿಕೆ ಕರೆ ಸಂಬಂಧ ಕಾಂತಾ ಪ್ರಸಾದ್ ಮಾಲ್ವಿಯಾ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಸಾಮಾಜಿಕ ಜಾಲತಾಣದ ಮೂಲಕ ರಾತ್ರೋ ರಾತ್ರಿ ಫೇಮಸ್ ಆಗಿದ್ದನ್ನ ಸಹಿಸದ ಜನರು ನನಗೆ ಈ ರೀತಿ ಹಿಂದೆ ನೀಡುತ್ತಿರಬಹುದು ಅಂತಾ ಕಾಂತಾ ಪ್ರಸಾದ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ನನಗೆ ಯಾರೊಂದಿಗೂ ಪೈಪೋಟಿ ಇಲ್ಲ ಅಂತಾ ಬಾಬಾ ಕಾ ಡಾಬಾ ಮಾಲೀಕ ಹೇಳಿದ್ದಾರೆ.
ಬೆದರಿಕೆ ಕರೆ ಸಂಬಂಧ ಕಾಂತಾ ಪ್ರಸಾದ್ ಪರ ವಕೀಲ, ವಾಸನ್ ಮೇಲೆ ಶಂಕೆ ವ್ಯಕ್ತಪಡಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯುಟ್ಯೂಬರ್ ಗೌರವ್ ವಾಸನ್ ಪ್ರಸಾದ್ರ ಹಾದಿಯನ್ನ ತಪ್ಪಿಸಲಾಗುತ್ತಿದೆ. ಪೊಲೀಸರು ಶೀಘ್ರದಲ್ಲೇ ಸತ್ಯವನ್ನ ಬಹಿರಂಗ ಪಡಿಸ್ತಾರೆ ಎಂದು ಹೇಳಿದ್ದಾರೆ.