ಉತ್ತರ ಪ್ರದೇಶದ ಮೊಹಮ್ಮದಾಬಾದ್ ಗೋಹ್ನಾ ತಹಸೀಲ್ನಲ್ಲಿ ಶನಿವಾರ 128 ಪುರಾತನ ನಾಣ್ಯಗಳು, ಪ್ರತಿಮೆಗಳು ಹಾಗೂ ಪಾತ್ರೆಗಳ ಅವಶೇಷಗಳನ್ನ ಗ್ರಾಮಸ್ಥರು ಪತ್ತೆ ಹಚ್ಚಿದ್ದಾರೆ.
ಪತ್ತೆಯಾದ ನಾಣ್ಯಗಳಲ್ಲಿ ಕೆಲವು ನಾಣ್ಯಗಳು 1500 ರಿಂದ 2000 ವರ್ಷಕ್ಕಿಂತ ಹಳೆಯ ಕಾಲದವು ಎಂದು ಜಿಲ್ಲಾಧಿಕಾರಿ ಅಮಿತ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.
ಈ ನಾಣ್ಯ ಹಾಗೂ ವಿಗ್ರಹಗಳನ್ನ ಪತ್ತೆ ಹಚ್ಚಿದ ಬಳಿಕ ಗ್ರಾಮಸ್ಥರು ಪುರಾತತ್ವ ನಿರ್ದೇಶನಾಲಯಕ್ಕೆ ಮಾಹಿತಿ ನೀಡಿದ್ರು. ಕೂಡಲೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಪುರಾತನ ವಸ್ತುಗಳನ್ನ ತಮ್ಮ ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ.