ನವದೆಹಲಿ: ಭಾರತದಲ್ಲಿ ಎರಡು ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿಲ್ಲ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮತಿ ಸಿಕ್ಕಿಲ್ಲ. ಈ ಎರಡು ಲಸಿಕೆಗಳು ತುರ್ತು ಬಳಕೆಗೆ ಯೋಗ್ಯವಲ್ಲವೆಂದು CDSCO ಹೇಳಿದೆ.
ಸುರಕ್ಷತೆ, ಪ್ರಯೋಗದ ಸಮರ್ಪಕ ದಾಖಲೆ ಕೊರತೆ ಹಿನ್ನೆಲೆಯಲ್ಲಿ ಎರಡು ಲಸಿಕೆಗಳ ತುರ್ತು ಬಳಕೆಗೆ ಅನುಮತಿ ಸಿಕ್ಕಿಲ್ಲ. ಪ್ರಯೋಗದ ಕುರಿತಾಗಿ ಹೆಚ್ಚಿನ ಮಾಹಿತಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಸಮರ್ಪಕ ದಾಖಲೆ ಸಲ್ಲಿಸಿದ ನಂತರ ಬಳಕೆಗೆ ಅನುಮತಿ ಸಿಗಲಿದೆ ಎಂದು ಹೇಳಲಾಗಿದೆ.