2020ರಲ್ಲಿ ಅತಿ ಹೆಚ್ಚು ಲೈಕ್ಸ್ ಪಡೆದ ಟ್ವೀಟ್ ಯಾರದ್ದು ಗೊತ್ತಾ..? 08-12-2020 4:50PM IST / No Comments / Posted In: Latest News, Sports 2020ರ ವರ್ಷ ಕೊನೆಯಾಗಲು ಇನ್ನೇನು ಒಂದು ತಿಂಗಳು ಬಾಕಿ ಉಳಿದಿದೆ. ಈ ವರ್ಷ ಟ್ವಿಟರ್ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಯಾವುದು ಅಂದರೆ ನೀವು ಕೊರೊನಾಗೆ ಸಂಬಂಧಿಸಿದ ಯಾವುದಾದರೊಂದು ವಿಚಾರ ಇದ್ದಿರಬಹುದೆಂದು ಊಹಿಸಿರಬಹುದು. ಆದರೆ ಈ ವರ್ಷ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಅನುಶ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪೋಷಕರಾಗುತ್ತಿದ್ದೇವೆ ಎಂದು ಸುದ್ದಿ ನೀಡಿದ ಟ್ವೀಟ್ ಆಗಿದೆ. ಟ್ವಿಟರ್ ಇಂಡಿಯಾ ಸಂಸ್ಥೆ ಇಡೀ ವರ್ಷದ ಎಲ್ಲಾ ಟ್ವೀಟ್ಗಳನ್ನ ರೀಕಾಲ್ ಮಾಡಿದ್ದು ಇದರಲ್ಲಿ ವಿರಾಟ್ ಕೊಹ್ಲಿ ತಮ್ಮ ಪತ್ನಿ ಗರ್ಭಿಣಿ ಎಂದು ಅನೌನ್ಸ್ ಮಾಡಿದ ಟ್ವೀಟ್ ಈ ವರ್ಷದಲ್ಲಿ ಅತಿ ಹೆಚ್ಚು ಲೈಕ್ ಪಡೆದ ಪೋಸ್ಟ್ ಆಗಿದೆ. ಆಗಸ್ಟ್ 27ರಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ತಾನು ತಂದೆಯಾಗುತ್ತಿದ್ದೇನೆ ಎಂಬ ಸಿಹಿ ಸುದ್ದಿಯನ್ನ ಹಂಚಿಕೊಂಡಿದ್ರು. ಪತ್ನಿಯ ಜೊತೆಗಿನ ಫೋಟೋ ಶೇರ್ ಮಾಡಿದ್ದ ವಿರಾಟ್ ನಾವಿನ್ನು ಮೂವರಾಗುತ್ತಿದ್ದೇವೆ. 2021ಕ್ಕೆ ಮಗುವಿನ ಆಗಮನವಾಗಲಿದೆ ಎಂದು ಬರೆದುಕೊಂಡಿದ್ದರು. ಈ ವರ್ಷ ಅತೀ ಹೆಚ್ಚು ಬಳಕೆಯಾದ ಹ್ಯಾಶ್ಟ್ಯಾಗ್ ಕೋವಿಡ್ 19(#Covid19) ಆಗಿದೆ. And then, we were three! Arriving Jan 2021 ❤️🙏 pic.twitter.com/0BDSogBM1n — Virat Kohli (@imVkohli) August 27, 2020