alex Certify ರಾಜಸ್ಥಾನದ ಅಭಯಾರಣ್ಯಗಳಲ್ಲಿ ಮುಂದಿನ ವರ್ಷದವರೆಗೆ ರೆಡ್​ ಅಲರ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನದ ಅಭಯಾರಣ್ಯಗಳಲ್ಲಿ ಮುಂದಿನ ವರ್ಷದವರೆಗೆ ರೆಡ್​ ಅಲರ್ಟ್..!

ರಾಜಸ್ಥಾನ ಸರ್ಕಾರ 2021ರ ಫೆಬ್ರವರಿ 28ರವರೆಗೆ ರಾಜ್ಯದ ಎಲ್ಲಾ ವನ್ಯಜೀವಿ ಮೀಸಲು ಅಭಯಾರಣ್ಯ ಹಾಗೂ ಉದ್ಯಾನವನಗಳಲ್ಲಿ ರೆಡ್​ ಅಲರ್ಟ್ ಘೋಷಣೆ ಮಾಡಿದೆ. ರೆಡ್​ ಅಲರ್ಟ್​ನಡಿಯಲ್ಲಿ ಎಲ್ಲಾ ಅರಣ್ಯ ಅಧಿಕಾರಿಗಳಿಗೆ ಬೇಟೆಗಾರರ ಶೋಧ ಕಾರ್ಯ ನಡೆಸುವಂತೆ ಸೂಚನೆ ನೀಡಲಾಗಿದೆ. ಹಾಗೂ ಈ ಕಾರ್ಯಾಚರಣೆಗಾಗಿ ಸ್ಥಳೀಯ ಪೊಲೀಸರ ನೆರವು ಪಡೆಯುವಂತೆ ನಿರ್ದೇಶಿಸಲಾಗಿದೆ.

ಶನಿವಾರ ಹೊರಡಿಸಲಾದ ಆದೇಶದಲ್ಲಿ ರೆಡ್​ ಅಲರ್ಟ್​ ಅಡಿಯಲ್ಲಿರುವ ಎಲ್ಲ ಅರಣ್ಯ ಅಧಿಕಾರಿಗಳಿಗೆ ಶೋಧ ಕಾರ್ಯಾಚರಣೆಯನ್ನ ತೀವ್ರಗೊಳಿಸಲು ಹಾಗೂ ಸ್ಥಳೀಯ ಪೊಲೀಸರ ಸಹಾಯ ಪಡೆದು ಬೇಟೆಗಾರರನ್ನ ಬಂಧಿಸುವಂತೆ ಹೇಳಿದೆ.

ಬೇಟೆಗಾರರು ಹಾಕಿದ ತಂತಿ ರಣಥಂಬೋರ್​ ಹುಲಿಯ ಕುತ್ತಿಗೆಯಲ್ಲಿ ಪತ್ತೆಯಾದ ಹಿನ್ನೆಲೆ ರಾಜಸ್ಥಾನ ಸರ್ಕಾರ ಈ ಸೂಚನೆ ನೀಡಿದೆ.

ಕೆಲ ದಿನಗಳ ಹಿಂದಷ್ಟೇ ಸಾಂಬಾರ್​ ಜಿಂಕೆಗಳನ್ನ ಬೇಟೆಯಾಡಿದ ಐದು ಮಂದಿ ಬೇಟೆಗಾರರನ್ನ ಮೌಂಟ್​​ ಅಬುವಿನಲ್ಲಿ ಬಂಧಿಸಲಾಗಿತ್ತು. ಇದೀಗ ರಣಥಂಬೋರ್​ ಹುಲಿಗೂ ಸಂಚಕಾರ ಎದುರಾಗಿದೆ ಎಂಬುದು ಗಮನಕ್ಕೆ ಬಂದ ಹಿನ್ನೆಲೆ 2021ರ ಫೆಬ್ರವರಿವರೆಗೆ ರೆಡ್​ ಅಲರ್ಟ್ ಘೋಷಣೆ ಮಾಡಿದ್ದೇವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಶ್ರುತಿ ಶರ್ಮಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...