ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ತೀರದಲ್ಲಿ ವಾಸಿಸುತ್ತಿದ್ದ ಬರೋಬ್ಬರಿ 81 ವರ್ಷದ ಮಿಡ್ನೈಟ್ ಸ್ನ್ಯಾಪರ್ ಎಂಬ ಮೀನನ್ನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಮೀನನ್ನ ಉಷ್ಣವಲಯದ ಅತ್ಯಂತ ಹಳೆಯ ಮೀನು ಎಂದು ಗುರುತಿಸಲಾಗಿದೆ.
ಈವರೆಗೆ ಉಷ್ಣವಲಯದಲ್ಲಿ ನಾವು ಕಂಡುಕೊಂಡ ಮೀನುಗಳು ಅಬ್ಬಬ್ಬಾ ಅಂದರೆ 60 ವರ್ಷ ಪ್ರಾಯದವಾಗಿದ್ದವು ಅಂತಾ ಆಸ್ಟ್ರೇಲಿಯಾದ ಕಡಲ ವಿಜ್ಞಾನ ಜೀವಶಾಸ್ತ್ರಜ್ಞ ಡಾ. ಬ್ರೆಟ್ ಟೈಲರ್ ಹೇಳಿದ್ದಾರೆ.
ಈಗ ಪತ್ತೆಯಗಿರುವ ಈ ಮೀನು ಎರಡನೇ ಮಹಾಯುದ್ಧಕ್ಕೂ ಹಿಂದೆಯೇ ಜನಿಸಿದೆ ಎಂದು ನಂಬಲಾಗಿದೆ. ಪಶ್ಚಿಮ ಆಸ್ಟ್ರೇಲಿಯಾದ ನಾಲ್ಕು ಸ್ಥಳಗಳಲ್ಲಿ ಹಾಗೂ ಮಧ್ಯ ಹಿಂದೂ ಮಹಾಸಾಗರದ ಚಾಗೋಸ್ ದ್ವೀಪಸಮೂಹದಲ್ಲಿ ಮೂರು ಪ್ರಭೇದಗಳ ಮೇಲೆ ಸಂಶೋಧಕರು ಗಮನಹರಿಸಿದ್ದಾರೆ. ಮೀನುಗಳ ಕಿವಿಮೂಳೆಗಳ ಸಹಾಯದಿಂದ ಅವುಗಳ ವಯಸ್ಸನ್ನ ನಿರ್ಧರಿಸಲಾಗುತ್ತೆ.