ಕೊರೋನಾ ವೈರಸ್ ಸಾಕಷ್ಟು ಕುಟುಂಬಗಳ ಪಥವನ್ನೇ ಬದಲಿಸಿಬಿಟ್ಟಿದೆ. ಕೆಲವರಿಗಂತೂ ಅತ್ಯಂತ ಕೆಟ್ಟ ಮಟ್ಟದಲ್ಲಿ ಈ ವೈರಸ್ ಕಾಡಿಬಿಟ್ಟಿದೆ.
ರೇಡನ್ ಗೊನ್ಝಾಲೆಝ್ ಹೆಸರಿನ ಈ 5 ವರ್ಷದ ಬಾಲಕನ ತಂದೆ ಹಾಗೂ ತಾಯಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದರು. ಸೋಂಕು ತಗುಲಿದ 100 ದಿನಗಳ ಒಳಗೆ ಇಬ್ಬರೂ ಮೃತಪಟ್ಟಿದ್ದರು.
ಇದೀಗ ರೇಡನ್ಗೆ 5 ವರ್ಷ ತುಂಬಿದ್ದು, ಆತ ಇರುವ ಸಮುದಾಯದ ಅಷ್ಟೂ ಮಂದಿ ಆತನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ನವೆಂಬರ್ 22ರಂದು ಆತನಿಗೆ ಹುಟ್ಟುಹಬ್ಬದ ಪರೇಡ್ ಮಾಡಲಾಗಿದ್ದು, ಬಾಲಕನನ್ನು ಖುಷಿ ಪಡಿಸಲು ಸ್ಥಳೀಯರು ತಮ್ಮ ಕೈಯಲ್ಲಿ ಸಾಧ್ಯವಿದ್ದಷ್ಟನ್ನೂ ಮಾಡಿದ್ದಾರೆ. ಸೂಪರ್ಮ್ಯಾನ್, ಬ್ಯಾಟ್ಮ್ಯಾನ್ ವೇಷಧಾರಿಯಾಗಿ ಕಾಣಿಸಿಕೊಂಡ ಮಂದಿ, ರೇಡನ್ ಹುಟ್ಟುಹಬ್ಬವನ್ನು ವಿಶೇಷವಾದ ದಿನವನ್ನಾಗಿ ಮಾಡಿದ್ದಾರೆ.
ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡ ಸ್ಯಾನ್ ಆಂಟೋನಿಯೋ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ರೇಡನ್ಗೆ ಚಿಯರ್ ಅಪ್ ಮಾಡಿದ್ದಾರೆ.
https://www.facebook.com/watch/?v=143704610428697&t=1