ನವದೆಹಲಿ:ಕೊರೊನಾಗೆ ಪರಿಣಾಮಕಾರಿ ಲಸಿಕೆ ಇಲ್ಲದೆ ಶೇ.83 ರಷ್ಟು ಭಾರತೀಯ ಉದ್ಯೋಗಿಗಳು ಕಚೇರಿಗಳಿಗೆ ಮರಳಲು ಇನ್ನೂ ಭಯ ಪಡುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಆಸ್ಟ್ರೇಲಿಯಾ ಮೂಲದ ಅಟ್ಲಾಸಿನ್ ಕಾರ್ಪೊರೇಷನ್ ಎಂಬ ಸಾಫ್ಟ್ ವೇರ್ ಕಂಪನಿ ಸರ್ವೆ ಮಾಡಿ ಶುಕ್ರವಾರ ವರದಿ ಬಿಡುಗಡೆ ಮಾಡಿದೆ. ಭಾರತೀಯರು ಇತರ ದೇಶಗಳಿಗಿಂತ ಹೆಚ್ಚು ಮನೆಯಲ್ಲೇ ಇದ್ದು ಕೆಲಸ ಮಾಡಲು ಇಚ್ಛೆಪಡುತ್ತಾರೆ ಎಂದು ಅಧ್ಯಯನ ಹೇಳಿದೆ.
ಶೇ.70 ರಷ್ಟು ಉದ್ಯೋಗಿಗಳು ಕೋವಿಡ್ ಗಿಂತ ಮೊದಲಿನ ಕೆಲಸಕ್ಕಿಂತ ಈಗಿನ ಕಾರ್ಯನಿರ್ವಹಣೆಯಲ್ಲೇ ಖುಷಿ ಇದೆ ಎಂದು ಹೇಳಿದ್ದಾರೆ. ಈ ನಡುವೆ ಉದ್ಯೋಗಿಗಳು ವರ್ಕ್ ಫ್ರಂ ಹೋಂನಲ್ಲಿ ಇನ್ನೂ ಕೆಲವು ಸಮಸ್ಯೆಗಳನ್ನೂ ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.