ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ನಿವಾರ್ ಚಂಡಮಾರುತ ಉಂಟಾಗಿದ್ದು, ಇದೇ ವೇಳೆ ನೈರುತ್ಯ ಅರಬ್ಬಿ ಸಮುದ್ರದಲ್ಲಿ ಗತಿ ಚಂಡಮಾರುತ ಎದ್ದಿದೆ. ಇಂದಿನಿಂದ ಮೂರ್ನಾಲ್ಕು ದಿನಗಳ ಕಾಲ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ನಿವಾರ್ ಚಂಡಮಾರುತ ಪರಿಣಾಮ ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನವೆಂಬರ್ 25, 26 ರಂದು ದಕ್ಷಿಣ ಕರ್ನಾಟಕ ಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ನೈರುತ್ಯ ಅರಬ್ಬಿ ಸಮುದ್ರದಲ್ಲಿ ಗತಿ ಚಂಡಮಾರುತ ಉಂಟಾಗಿದ್ದು ನವೆಂಬರ್ 24, 25 ರಂದು ಹಲವೆಡೆ ಭಾರಿ ಮಳೆಯಾಗಲಿದೆ. ನಿವಾರ್ ಚಂಡಮಾರುತ ಪೂರ್ವ ದಿಕ್ಕಿನ ಕಡೆಗೆ ಸಾಗಿ ತಮಿಳುನಾಡು ಪ್ರವೇಶಿಸಲಿದ್ದು ದಕ್ಷಿಣ ಭಾರತದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.