ಲಂಡನ್: ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರಾಝೆನಿಕಾ ಔಷಧ ಕಂಪನಿ ಅಭಿವೃದ್ಧಿಪಡಿಸುತ್ತಿರುವ ಕೊರೋನಾ ಲಸಿಕೆ ಮೂರನೇ ಹಂತದ ಪ್ರಯೋಗದ ಮಧ್ಯಂತರ ಹಂತದಲ್ಲಿ ಶೇಕಡ 90 ರಷ್ಟು ಪರಿಣಾಮಕಾರಿಯಾಗಿದೆ ಎನ್ನುವುದು ಗೊತ್ತಾಗಿದೆ.
ಕಡಿಮೆ ದರದ ಸುಲಭವಾಗಿ ಸಾಗಾಣೆ ಮಾಡಬಹುದಾದ ಔಷಧವನ್ನು ಭಾರತದಲ್ಲಿಯೂ ವಿತರಿಸಲಾಗುವುದು. ಅಮೆರಿಕದ ಫೈಜರ್ ಮತ್ತು ಮಾಡೆರ್ನಾ ಲಸಿಕೆ ಯಶಸ್ವಿಯಾಗಿದೆ ಎನ್ನುವುದು ಪ್ರಯೋಗದಲ್ಲಿ ಗೊತ್ತಾಗಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನಿಕಾ ಲಸಿಕೆ ಕೂಡ ಯಶಸ್ವಿಯಾಗಿದೆ ಎನ್ನುವುದು ತಿಳಿದುಬಂದಿದೆ. ಈ ಲಸಿಕೆಯನ್ನು ಸಂಗ್ರಹಿಸಿಡಲು -70 ಡಿಗ್ರಿ ಉಷ್ಣಾಂಶದ ಅಗತ್ಯತೆ ಇಲ್ಲ. 2 -8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಇದನ್ನು ಸಂಗ್ರಹಿಸಬಹುದಾಗಿದೆ. ಸುಲಭವಾಗಿ ಎಲ್ಲ ಕಡೆ ಸಾಗಿಸಬಹುದು. ಬೇರೆ ಲಸಿಕೆಗಳಿಗೆ ಹೋಲಿಸಿದರೆ ದರ ಕಡಿಮೆ ಇರಲಿದೆ ಎಂದು ಹೇಳಲಾಗಿದೆ.