ಮೀನು ಸೇವನೆಯಿಂದ ಕೊರೊನಾ ಹರಡುತ್ತೆ ಎಂಬ ವದಂತಿಗೆ ತೆರೆ ಎಳೆಯುವ ಸಲುವಾಗಿ ಶ್ರೀಲಂಕಾ ಮಾಜಿ ಸಚಿವರೊಬ್ಬರು ಲೈವ್ನಲ್ಲೇ ಹಸಿ ಮೀನನ್ನ ತಿಂದು ತೋರಿಸಿದ್ದಾರೆ.
2019ರವರೆಗೆ ಶ್ರೀಲಂಕಾದ ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದ ದಿಲೀಪ್ ವೆಡರಾಚಿ ಕೊಲಂಬೋದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಅವ್ರು ಮೀನಿನಿಂದ ಕೊರೊನಾ ಬರುತ್ತೆ ಎಂದು ಜನರು ಮೀನು ಸೇವಿಸೋದನ್ನೇ ಬಿಡುತ್ತಿದ್ದಾರೆ. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಮೀನಿನಿಂದ ಯಾವುದೇ ರೀತಿಯ ಸೋಂಕು ಹರಡಲ್ಲ ಎಂದು ಹೇಳಿದ ಬಳಿಕ ತಾವೇ ಸ್ವತಃ ಮೀನನ್ನ ತಿಂದಿದ್ದಾರೆ.