ದೀಪಾವಳಿ ಹಬ್ಬದಲ್ಲಿ ಶುಭಾಶಯ ಕೋರುವುದರ ಜೊತೆಗೆ ದೀಪವನ್ನು ಹಚ್ಚಿ ಪಟಾಕಿ ಹೊಡೆಯಬೇಡಿ ಎಂದು ಹಲವಾರು ಗಣ್ಯರು ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದೇ ರೀತಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡ ಮನವಿ ಮಾಡಿದ್ದರು. ಈ ವಿಡಿಯೋ ಟ್ರೋಲ್ ಆಗಿದೆ. ಅಲ್ಲದೆ ನಟಿ ಕಸ್ತೂರಿ ಶಂಕರ್ ಕೂಡ ವಿರಾಟ್ ಕೊಹ್ಲಿಗೆ ಪಾಠ ಮಾಡಿದ್ದಾರೆ.
ಹೌದು, ಅತ್ತ ದೀಪಾವಳಿ ಹಬ್ಬದಂದು ವಿಡಿಯೋ ಮೂಲಕ ವಿಶ್ ಮಾಡಿ ಸಂದೇಶ ನೀಡಿದ್ದ ವಿರಾಟ್ ಕೊಹ್ಲಿ ಟ್ರೋಲ್ ಆಗೋದಿಕ್ಕೆ ಅವರ ಹುಟ್ಟುಹಬ್ಬವೇ ಕಾರಣವಾಗಿತ್ತು. ಹುಟ್ಟುಹಬ್ಬದ ದಿನದಂದು ಪಟಾಕಿ ಸಿಡಿಸಿ ಸಂಭ್ರಮಿಸಲಾಗಿತ್ತು. ಹೀಗಾಗಿ ಹಿಂದಿನ ವಿಡಿಯೋಗಳು ಹಾಗೂ ವಿಶ್ ಮಾಡಿದ್ದ ವಿಡಿಯೋಗಳನ್ನು ಟ್ರೋಲ್ ಮಾಡಿದ್ದರು.
ಇದೀಗ ನಟಿ ಕಸ್ತೂರಿ ಶಂಕರ್ ಕೂಡ ಇವರಿಗೆ ಒಂದಿಷ್ಟು ಪ್ರಶ್ನೆಗಳನ್ನು ಟ್ವಿಟ್ ಮೂಲಕ ಕೇಳಿದ್ದಾರೆ. ಯಾವುದೇ ಸಂದೇಶ ಕೊಡುವ ಮುನ್ನ ಅದರ ಆಗು-ಹೋಗುಗಳ ಬಗ್ಗೆ ಯೋಚನೆ ಮಾಡಿ. ಪಟಾಕಿ ಹೊಡೆಯಬೇಡಿ ಎಂದು ಹೇಳುತ್ತಿದ್ದೀರಲ್ಲಾ ಆ ಪಟಾಕಿ ತಯಾರು ಮಾಡುವ ಕುಟುಂಬಗಳಿಗೆ ಪಟಾಕಿ ಬ್ಯಾನ್ ಮಾಡಿದರೆ ಅವರ ಜೀವನ ಏನಾಗುತ್ತದೆ ಎಂಬುದು ಗೊತ್ತಿದೆಯಾ ಎಂದು ಕೇಳಿದ್ದಾರೆ. ಪಟಾಕಿಯಿಂದ ಶಬ್ದ ಮಾಲಿನ್ಯ ಆಗೋದ್ರಾದ್ರೆ, ಸ್ಪೋರ್ಟ್ಸ್ ಕಾರ್ನಿಂದ ಶಬ್ದ ಮಾಲಿನ್ಯ ಆಗೋದಿಲ್ವಾ ಎಂದು ಪ್ರಶ್ನಿಸಿದ್ದಾರೆ ಈ ನಟಿ. ನೀವೊಬ್ಬ ಯೂಥ್ ಐಕಾನ್. ಹಾಗಾಗಿ ಯಾವುದೇ ಹೇಳಿಕೆ, ಸಂದೇಶ ಕೊಡುವ ಮುನ್ನ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.