ಅಮೆರಿಕದ ಕೆಂಟುಕಿ ರಾಜ್ಯದ ರ್ಯಾಬಿಟ್ ಹ್ಯಾಶ್ ಎಂಬ ಕುಗ್ರಾಮವು ಈ ವರ್ಷದ ಹೊಸ ಮೇಯರ್ನ್ನು ಆಯ್ಕೆ ಮಾಡಿದೆ.
ಆದರೆ ಈ ಮೇಯರ್ ಆಗಿ ಮನುಷ್ಯನನ್ನ ಆಯ್ಕೆ ಮಾಡುವ ಬದಲು 6 ತಿಂಗಳು ವಯಸ್ಸಿನ ಫ್ರೆಂಚ್ ಬುಲ್ಡಾಗ್ನ್ನ ಆಯ್ಕೆ ಮಾಡಲಾಗಿದೆ. 1990ರ ದಶಕದಿಂದಲೂ ಇಲ್ಲಿ ಮನುಷ್ಯರನ್ನ ಮೇಯರ್ ಆಗಿ ಆಯ್ಕೆ ಮಾಡುವ ಪದ್ಧತಿ ಇಲ್ಲ ಎಂದು ಹೇಳಲಾಗಿದೆ.
ಫ್ರೆಂಚ್ ಬುಲ್ಡಾಗ್ 13,143 ಮತಗಳೊಂದಿಗೆ ವಿಜಯ ಗಳಿಸಿದೆ. ಅಂದಹಾಗೆ ಇದು ಈವರೆಗಿನ ಗರಿಷ್ಠ ಮೊತ್ತದ ಮತ ಎಂದು ಪರಿಗಣಿಸಲಾಗಿದೆ. ಇನ್ನು ಈ ಚುನಾವಣೆಯಲ್ಲಿ ಬೀಗಲ್ ಜಾತಿಯ ನಾಯಿ ಎರಡನೇ ಸ್ಥಾನ ಪಡೆದ್ರೆ ಗೋಲ್ಡನ್ ರಿಟ್ರೈವರ್ ಮೂರನೇ ಸ್ಥಾನ ಪಡೆದಿದೆ. ಈ ರೀತಿ ಮನುಷ್ಯರ ಬದಲಿಗೆ ಪ್ರಾಣಿಗಳನ್ನ ಮೇಯರ್ನ್ನಾಗಿ ಮಾಡುವ ಪ್ರಕ್ರಿಯೆ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.