ಆನ್ಲೈನ್‌ನಲ್ಲಿ ಖಾದ್ಯವನ್ನು ಆರ್ಡರ್ ಮಾಡಿದ್ದ ಗ್ರಾಹಕರಿಗೆ ಪೊಲೀಸ್ ಅಧಿಕಾರಿಯೊಬ್ಬರು ಫುಡ್ ಡೆಲಿವರಿ ಮಾಡಿದ್ದನ್ನು ಕಂಡು ದಂಗಾಗಿರುವ ಘಟನೆ ಬ್ರಿಟನ್‌ನಲ್ಲಿ ಜರುಗಿದೆ.
ಡೆಲಿವರಿ ಬಾಯ್ ಮಾದಕ ದ್ರವ್ಯದ ನಶೆಯಲ್ಲಿ ವಾಹನ ಚಲಾಯಿಸುತ್ತಾ ಸಿಕ್ಕಿಬಿದ್ದ ಕಾರಣ ಆತನನ್ನು ಪೊಲೀಸರು ಬಂಧಿಸಿದ್ದರು. ಇದರಿಂದಾಗಿ ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಯಾವುದೇ ತೊಂದರೆಯಾಗಬಾರದೆಂದು ಪೊಲೀಸರೇ ಆಹಾರವನ್ನು ಡೆಲಿವರಿ ಮಾಡಿದ್ದಾರೆ.
ಡೆಲಿವರಿ ಐಟಮ್ ಗಳನ್ನು ತೆಗೆದುಕೊಂಡು ಕಾರಿನಲ್ಲಿ ಹೊರಟಿದ್ದ ಈತನನ್ನು ಥೇಮ್ಸ್ ವ್ಯಾಲಿ ಪೊಲೀಸರು ಅಡ್ಡಗಟ್ಟಿ ಲೈಸೆನ್ಸ್ ಹಾಗೂ ಇನ್ಶೂರೆನ್ಸ್ ಅನ್ನು ಕೇಳಿದಾಗ ಆತ ತಪ್ಪು ಮಾಹಿತಿ ಕೊಟ್ಟ ಕಾರಣಕ್ಕಾಗಿ ಬಂಧಿಸಲಾಗಿದೆ. ವಿಚಾರಣೆ ಬಳಿಕ ಆತನ ಬಳಿ ಮಾದಕ ದ್ರವ್ಯಗಳೂ ಇವೆ ಎಂದು ತಿಳಿದುಬಂದಿದೆ. ಇದೇ ವೇಳೆ ಆತನ ವಾಹನವನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.