ಫೇಸ್‌ಬುಕ್‌ನಲ್ಲಿ ಬಳಕೆದಾರರ ಗೌಪ್ಯತೆ ಬಗ್ಗೆ ಒಂದಿಷ್ಟು ಜನ ಅನುಮಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಭರವಸೆಯನ್ನು ನೀಡಿತ್ತು. ಯಾವುದೇ ಕಾರಣಕ್ಕೂ ನಿಮ್ಮ ಗೌಪ್ಯತೆ ಬೇರೆಯವರಿಗೆ ತಿಳಿಯದಂತೆ ಕ್ರಮ ವಹಿಸೋದಾಗಿ ಹೇಳಿದ್ದ ಬೆನ್ನಲ್ಲೇ ಇದೀಗ ಈ ಬಗ್ಗೆ ಸಂಶೋಧನೆ ಮುಂದುವರೆಯುತ್ತದೆ ಎಂದು ಹೇಳಿದೆ.
ಹೌದು, ಫೇಸ್ ಬುಕ್ ಬಳಕೆದಾರರ ಗೌಪ್ಯತೆ ಮತ್ತು ದತ್ತಾಂಶ ಸುರಕ್ಷತೆಯ ಬಗ್ಗೆ ಹೆಚ್ಚು ಒತ್ತು ನೀಡುತ್ತಿದೆ ಫೇಸ್ ಬುಕ್. ಹೀಗಾಗಿ ಸಂಶೋಧನೆ ಮುಂದುವರೆಸಿದ್ದು, ಹೊಸ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಫೆಡರಲ್ ಆಂಟಿಟ್ರಸ್ಟ್ ತನಿಖೆಯೂ ಕೊನೆ ಹಂತ ತಲುಪಿದೆ ಎನ್ನಲಾಗುತ್ತಿದೆ.
ಇನ್ನು ಈ ಕುರಿತು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದ ತಂಡಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ ಉತ್ಪನ್ನದ ಮುಖ್ಯ ಗೌಪ್ಯತೆ ಅಧಿಕಾರಿ ಮಿಚೆಲ್ ಪ್ರೊಟಿ. ಡಾಟಾ ಸುರಕ್ಷತೆ ಹಾಗೂ ಗೌಪ್ಯತೆ ಮತ್ತು ಸುರಕ್ಷಿತ ಉತ್ಪನ್ನಗಳನ್ನು ರಚಿಸುವ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು ಅನೇಕ ತಂಡಗಳು ಶ್ರಮ ವಹಿಸಿವೆ ಎಂದು ತಿಳಿಸಿದ್ದಾರೆ. ಹಾಗೆಯೇ ಪಬ್ಲಿಕ್ ಗ್ರೂಪ್‌ನಲ್ಲಿಯೂ ಬದಲಾವಣೆ ಮಾಡಲಾಗಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಕ್ಯಾಂಪಸ್ ಮತ್ತು ಅಕೌಂಟ್ಸ್ ಸೆಂಟರ್‌ನಲ್ಲಿ ಸ್ಟೋರ್‌ಗಳಂತಹ ಹೊಸ ಉತ್ಪನ್ನಗಳನ್ನು ರಚಿಸಲಾಗಿದೆ.