ಸಾಮಾಜಿಕ ಜಾಲತಾಣವನ್ನ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡ್ರೆ ಅದು ಎಷ್ಟು ಲಾಭ ತರುತ್ತೆ ಅನ್ನೋದಕ್ಕೆ ಕೆಲ ದಿನಗಳ ಹಿಂದಷ್ಟೇ ವೈರಲ್ ಆದ ʼಬಾಬಾ ಕಾ ಡಾಬಾʼ ವಿಡಿಯೋನೇ ಸಾಕ್ಷಿ. ಅಂಗಡಿಯಲ್ಲಿ ಗ್ರಾಹಕರಿಲ್ಲ ಎಂದು ಅಳ್ತಿದ್ದ ವೃದ್ಧನ ವಿಡಿಯೋ ಎಷ್ಟರ ಮಟ್ಟಿಗೆ ಸೌಂಡ್ ಮಾಡಿತ್ತು ಅಂದ್ರೆ ಮಾರನೇ ದಿನದಿಂದಲೇ ಅಂಗಡಿ ಮುಂದೆ ಕ್ಯೂ ನಿಂತಿತ್ತು. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಕೇರಳದ ಪಾರ್ವತಮ್ಮ ಎಂಬವರು ಡಾಬಾ ನಡೆಸ್ತಾ ಇದ್ದೂ ಅವ್ರೂ ಸಹ ಗ್ರಾಹಕರಿಲ್ಲದೇ ಕಣ್ಣೀರು ಹಾಕ್ತಿದ್ದಾರೆ. ಈ ವಿಡಿಯೋವನ್ನ ಪತ್ರಕರ್ತ ಆರಿಫ್ ಶಾ ಎಂಬವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಪಾರ್ವತಮ್ಮರ ಕಣ್ಣೀರ ಕತೆ ಕೇಳಿದ ಕೇರಳಿಗರು ಮನ್ನರ್ಕ್ಕಡ್ ನಲ್ಲಿರೋ ಕರಿಂಬಾ ಡಾಬಾಗೆ ವಿಸಿಟ್ ಕೊಡ್ತಿದ್ದಾರೆ.
ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಪಾರ್ವತಮ್ಮ ಇದೀಗ ಸೋಶಿಯಲ್ ಮೀಡಿಯಾದ ನೆರವಿನಿಂದ ನಿಧಾನವಾಗಿ ಗ್ರಾಹಕರನ್ನ ಸಂಪಾದಿಸುತ್ತಿದ್ದಾರೆ,
https://twitter.com/aarifshaah/status/1314999803542036486?ref_src=twsrc%5Etfw%7Ctwcamp%5Etweetembed%7Ctwterm%5E1314999803542036486%7Ctwgr%5Eshare_3&ref_url=https%3A%2F%2Fwww.news18.com%2Fnews%2Fbuzz%2Fafter-baba-ka-dhaba-keralites-band-together-to-help-parvathy-amma-struggling-to-make-a-living-2961896.html