ಬಾಲಿವುಡ್ ನಟಿ ಪೂಜಾ ಹೆಗ್ಡೆ ತಮ್ಮ ಸೌಂದರ್ಯದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸಣ್ಣಗೆ ಬಳುಕುವ ದೇಹ ಹೊಂದಿರಲು ಇದೇ ಕಾರಣ ಎಂದು ವಿವರಿಸಿದ್ದಾರೆ. ಅದೇನು ಗೊತ್ತೇ?
ಪಿಲಾಟೆಸ್ ಮಾಡುವುದೆಂದರೆ ಇವರಿಗೆ ಬಲು ಇಷ್ಟವಂತೆ. ಇದರಿಂದ ಪರಿಣಾಮ ಕೊಂಚ ನಿಧಾನವಾಗಿ ದೊರೆಯಬಹುದು. ಇದು ನಿಮ್ಮ ಸ್ನಾಯುಗಳನ್ನು ಬಿಗಿಗೊಳಿಸುತ್ತದೆ ಮತ್ತು ದೇಹದ ಫ್ಲೆಕ್ಸಿಬಿಲಿಟಿಗೆ ಕಾರಣವಾಗುತ್ತದೆ. ಕಿಕ್ ಬಾಕ್ಸಿಂಗ್ ಗೂ ಹೆಚ್ಚಿನ ಸಮಯ ಮೀಸಲಿಡುತ್ತಾರೆ.
ದೇಹ ಮತ್ತು ಮನಸ್ಸಿನ ಸಮತೋಲನಕ್ಕೆ ಯೋಗವೇ ಬೆಸ್ಟ್ ಎನ್ನುತ್ತಾರೆ ಪೂಜಾ. ವಾರಕ್ಕೆ ಐದು ದಿನ ಯೋಗ ಮಾಡುವ ಪೂಜಾ ಟ್ರೆಡ್ ಮಿಲ್ ನಲ್ಲೂ ಓಡುತ್ತಾರೆ. ಸಡನ್ ಆಗಿ ತೂಕ ಹೆಚ್ಚಿಸಿಕೊಂಡರೆ ಅದನ್ನು ಇಳಿಸಲೆಂದೇ ಪ್ರತ್ಯೇಕ ವ್ಯಾಯಾಮ ಮಾಡುತ್ತೇನೆ ಎನ್ನುತ್ತಾರೆ.
ಹೀರೋಯಿನ್ ಆಗಿರುವ ಮಾತ್ರಕ್ಕೆ ಈ ಎಲ್ಲಾ ವ್ಯಾಯಾಮಗಳನ್ನು ಮಾಡಬೇಕು ಎಂದಲ್ಲ. ನನ್ನ ಪ್ರಕಾರ ಎಲ್ಲರೂ ಫಿಟ್ ಆಗಿರುವುದು ಬಹಳ ಮುಖ್ಯ. ನಿಯಮಿತ ಆಹಾರದೊಂದಿಗೆ ನಿತ್ಯ ವ್ಯಾಯಾಮ ಮಾಡುವುದರಿಂದ ಕಾಯಿಲೆಗಳಿಂದಲೂ ದೂರವಿರಬಹುದು. ಆಕರ್ಷಕ ದೇಹ ನಿಮ್ಮದಾಗುವುದು.