ಭಾರತದ ಬಹು ನಿರೀಕ್ಷಿತ ಕ್ರೀಡೋತ್ಸವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮೇಲೆ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ಪ್ರಸಿದ್ಧ ರ‍್ಯಾಪರ್ ಕೃಷ್ಣಾ ಕೌಲ್ ಈ ಆರೋಪ ಮಾಡಿದ್ದಾರೆ.
ಐಪಿಎಲ್-2020 ಯಲ್ಲಿ ಬಳಸುತ್ತಿರುವ “ಹಮ್ ವಾಪಸ್ ಆಯೇಂಗೆ” ಎಂಬ ಹಾಡು ತಮ್ಮ “ದೇಖಾ ಕೋನಾ ಆಯಾ ವಾಪಸ್” ಲಿರಿಕ್ಸ್‌ನಂತೆಯೇ ಇದೆ. ಇದನ್ನು 2017 ರಲ್ಲಿ ನಾನು ರಚಿಸಿದ್ದಾಗಿತ್ತು ಎಂದು ಕೃಷ್ಣ ಕೌಲ್ ಹೇಳಿದ್ದಾರೆ. “ನನಗೆ ಮೊದಲು ಇದು ಗೊತ್ತಿರಲಿಲ್ಲ. ನನ್ನ ಕೆಲವು ಅಭಿಮಾನಿಗಳು ಇದನ್ನು ನೋಡಿ ಹೇಳಿದರು. ನೋಡಿದರೆ, ಅಚ್ಚರಿ. ಅತಿ ನಾಜೂಕಿನಿಂದ ಕೃತಿ ಚೌರ್ಯ ಮಾಡಲಾಗಿದೆ. ನನ್ನ 14 ವರ್ಷದ ಮ್ಯೂಸಿಕ್ ಕೆರಿಯರ್ ನಲ್ಲಿ ಈ ರೀತಿ ಅನುಭವ ಆಗಿರಲಿಲ್ಲ ಎಂದು ಕೃಷ್ಣಾ ಹೇಳಿದ್ದಾರೆ.
ಕೌಲ್ ತಮ್ಮ14 ನೇ ವರ್ಷಕ್ಕೆ ಲಂಡನ್‌ನಲ್ಲಿ ಮ್ಯೂಸಿಕ್ ಕಂಪೋಸಿಂಗ್ ಪ್ರಾರಂಭಿಸಿದರು. ಅಲ್ಲಿ ಪ್ರೊಜಾಕ್‌ಪಾಟ್ ಎಂದು ಪ್ರಸಿದ್ಧರಾಗಿದ್ದರು. ನಂತರ ಅವರು 2013 ರಲ್ಲಿ ಕೃಷ್ಣಾ ಎಂದು ಹೆಸರಿನಲ್ಲಿ ಭಾರತದಲ್ಲಿ ರ‍್ಯಾಪರ್ ಆಗಿ ಪ್ರಸಿದ್ಧರಾದರು. ಸದ್ಯ ನವದೆಹಲಿಯಲ್ಲಿ ಸೆಟಲ್ ಆಗಿದ್ದಾರೆ “ಸೇಲ್‌ಔಟ್” ಎಂಬುದು ಅವರ ಮೊದಲ ಅಲ್ಬಂ. ಅವರು ಮೊದಲು ವ್ಯವಸ್ಥೆ ವಿರುದ್ಧದ ಲಿರಿಕ್ಸ್‌ನಿಂದ ಭಾರತದಲ್ಲಿ ಪ್ರಸಿದ್ಧರಾಗಿದ್ದರು.