
ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಡ್ರಗ್ಸ್ ವಿಚಾರವಾಗಿ ದಿ. ಚಿರಂಜೀವಿ ಸರ್ಜಾ ಹೆಸರು ಬಳಕೆ ಮಾಡಿದ ಬಳಿಕ ಚಿರು ಪತ್ನಿ ನಟಿ ಮೇಘನಾ ರಾಜ್ ಚಲನಚಿತ್ರವಾಣಿಜ್ಯ ಮಂಡಳಿಗೆ ದೂರು ನೀಡಿದ ಬೆನ್ನಲ್ಲೇ ಇಂದ್ರಜಿತ್ ಅವರು ಮೇಘನಾ ಬಳಿ ಕ್ಷಮೆ ಯಾಚಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಚಿರು ಹೆಸರು ಬಳಕೆ ಮಾಡಿದ್ದರಿಂದ ಕುಟುಂಬಕ್ಕೆ ನೋವಾಗಿದ್ದರೆ ಕ್ಷಮೆಯಿರಲಿ ಎಂದಿದ್ದಾರೆ.
ನಾನು ನೀಡಿದ್ದ ಹೇಳಿಕೆ ವಾಪಸ್ ಪಡೆದಿದ್ದೇನೆ. ಚಿರು ನನಗೆ ಆತ್ಮೀಯ ಸ್ನೇಹಿತ. ನನ್ನ ಹೇಳಿಕೆಯಿಂದ ಅವರ ಕುಟುಂಬಕ್ಕೆ ನೋವಾಗಿದ್ದರೆ ಬಹಿರಂಗ ಕ್ಷಮೆ ಯಾಚನೆಗೂ ಸಿದ್ಧ. ಅವರ ಕುಟುಂಬ ಭೇಟಿಯಾಗಿ ಕ್ಷಮೆ ಕೇಳಲೂ ಸಿದ್ಧ. ಚಿರು ನನಗೆ ಆತ್ಮೀಯ ಸ್ನೇಹಿತನಾಗಿದ್ದ ಎಂದು ಹೇಳಿದ್ದಾರೆ.