ಮನೆಯಿಂದ ಕೆಲಸ ಮಾಡುವವರಿಗೆ ಹೆಚ್ಚಿನ ಡೇಟಾ ಅಗತ್ಯವಿದೆ. 1.5 ಜಿಬಿ, 2 ಜಿಬಿ ಕೆಲವೊಮ್ಮೆ ಗ್ರಾಹಕರಿಗೆ ಸಾಕಾಗುವುದಿಲ್ಲ. 3 ಜಿಬಿ ಪಡೆಯಲು ಗ್ರಾಹಕರು ಹೆಚ್ಚಿನ ಹಣ ಪಾವತಿ ಮಾಡಬೇಕಾಗುತ್ತದೆ. ಆದ್ರೆ ವೊಡಾಫೋನ್ ಇಂಡಿಯಾ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದೆ. 2ಜಿಬಿ ಡೇಟಾ ಬೆಲೆಗೆ 4 ಜಿಬಿ ಡೇಟಾವನ್ನು ಕಂಪನಿ ನೀಡ್ತಿದೆ.
ವೊಡಾಫೋನ್-ಐಡಿಯಾ ತನ್ನ ಕೆಲವು ಯೋಜನೆಗಳಲ್ಲಿ ಡಬಲ್ ಡೇಟಾ ಕೊಡುಗೆಗಳನ್ನು ನೀಡುತ್ತಿದೆ. ಈ ಹಿಂದೆ ಕಂಪನಿಯು 1.5 ಜಿಬಿ ಡೇಟಾ ಡಬಲ್ ಮಾಡಿ 3 ಜಿಬಿ ಡೇಟಾ ನೀಡುತ್ತಿತ್ತು. ದಿನಕ್ಕೆ 2 ಜಿಬಿ ಡೇಟಾವನ್ನು ಹೊಂದಿರುವ ಯೋಜನೆಗಳಲ್ಲಿ ಪ್ರಸ್ತುತ ಡಬಲ್ ಡೇಟಾವನ್ನು ನೀಡ್ತಿದೆ.
299 ರೂಪಾಯಿಗಳ ವೊಡಾಫೋನ್ – ಐಡಿಯಾ ಯೋಜನೆಯಲ್ಲಿ ಎಲ್ಲಾ ನೆಟ್ವರ್ಕ್‌ಗೆ ಅನಿಯಮಿತ ಕರೆ ಮಾಡಬಹುದು. ಯೋಜನೆಯು 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಪ್ರತಿದಿನ 4 ಜಿಬಿ ಡೇಟಾವನ್ನು ನೀಡಲಾಗುತ್ತದೆ. ಪ್ರತಿದಿನ 100 ಎಸ್‌ಎಂಎಸ್ ಮತ್ತು ವೊಡಾಫೋನ್ ಪ್ಲೇ ಮತ್ತು ಜೆಡ್‌ಇಇ 5 ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
449 ರೂಪಾಯಿ ಯೋಜನೆಯಲ್ಲೂ ಡಬಲ್ ಡೇಟಾ ಸಿಗ್ತಿದೆ. ಈ ಯೋಜನೆಯ ಸಿಂಧುತ್ವವು 56 ದಿನಗಳು. ಪ್ರತಿದಿನ 4 ಜಿಬಿ ಡೇಟಾ ಲಭ್ಯವಿದೆ. ಬಳಕೆದಾರರು ಒಟ್ಟು 224 ಜಿಬಿ ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ಇದಲ್ಲದೆ, ಅನಿಯಮಿತ ಕರೆ, ಪ್ರತಿದಿನ 100 ಎಸ್‌ಎಂಎಸ್ ಮತ್ತು ವೊಡಾಫೋನ್ ಪ್ಲೇ ಮತ್ತು ಜೆಡ್‌ಇಇ 5 ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಲಭ್ಯವಿದೆ.
ಇನ್ನೊಂದು 699 ರೂಪಾಯಿ ಯೋಜನೆ. ಈ ಯೋಜನೆಯಲ್ಲೂ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ. ಯೋಜನೆ 84 ದಿನಗಳ ಸಿಂಧುತ್ವು ಹೊಂದಿದೆ. ಪ್ರತಿದಿನ 4 ಜಿಬಿ ಡೇಟಾ ಸಿಗಲಿದೆ. ಪ್ರತಿದಿನ 100 ಎಸ್‌ಎಂಎಸ್ ಮತ್ತು ವೊಡಾಫೋನ್ ಪ್ಲೇ ಮತ್ತು ಜೆಡ್‌ಇಇ 5 ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಿಗಲಿದೆ.