ಏನೂ ಮಾಡದೇ ಇರುವುದೂ ಸಹ ಲಾಭದಾಯಕವಾಗಲಿದೆ ಎಂದರೆ ನಂಬುವಿರಾ…? ಹೌದು, ಜರ್ಮನಿಯ ಹ್ಯಾಂಬರ್ಗ್ನಲ್ಲಿರುವ ಕಲಾಶಾಸ್ತ್ರ ವಿವಿಯೊಂದು ಹೀಗೆ ಸುಮ್ಮನೇ ಇರಲು ಅರ್ಜಿ ಸಲ್ಲಿಸುವ ಮಂದಿಗೆ ಏನೂ ಮಾಡದೇ ಇರಲೆಂದೇ ‘idleness grants’ ರೂಪದಲ್ಲಿ 1600 ಯೂರೋಗಳನ್ನು ಕೊಡಲು ಮುಂದಾಗಿದೆ.
ಸಮಾಜದಲ್ಲಿ ಬರೀ ಸಾಧನೆ ಮಾಡಿದವರು ಹಾಗೂ ಯಶಸ್ಸುಗಳೇ ಎಲ್ಲವನ್ನೂ ನಿರ್ದೇಶಿಸುವಂತೆ ಇರಬಾರದು ಎಂಬ ವಿಚಿತ್ರ ವಾದವನ್ನು ಮುಂದಿಟ್ಟಿರುವ ವಿನ್ಯಾಸ ನಿರ್ಮಾಪಕ ಫ್ರೆಡ್ರಿಕ್ ವಾನ್ ಬಾರಿಸ್ ಈ ಮೇಲ್ಕಂಡ ಥಿಯರಿಯನ್ನು ಸೃಷ್ಟಿಸಿದ್ದಾರೆ.
ಸಕ್ರಿಯವಾಗಿ ’ನಿಷ್ಕ್ರಿಯವಾಗಿರುವ’ ಐಡಿಯಾ ಇದಾಗಿದ್ದು, ಅರ್ಜಿದಾರರು ಯಾವೊಂದು ಕೆಲಸವನ್ನು ನಿರ್ದಿಷ್ಟ ಅವಧಿಗೆ ಮಾಡದೇ ಇರಲು ಇಚ್ಛಿಸುತ್ತಾರೆ ಎಂದು ಆರಿಸಿಕೊಂಡು ಅದರಂತೆ ಇರಬಹುದಾಗಿದೆ. ಸೆಪ್ಟೆಂಬರ್ 15ರ ವರೆಗೂ ಈ ಅರ್ಜಿ ಸಲ್ಲಿಕೆ ಇದ್ದು, ’ನಿಷ್ಕ್ರಿಯತೆ’ ಬಗ್ಗೆ ಯಾರ ಐಡಿಯಾ ಚೆನ್ನಾಗಿದೆಯೋ ಅವರಿಗೆ ಈ ಗ್ರಾಂಟ್ ನೀಡಲಾಗುವುದು.