ವಿವಾಹಿತೆ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ.32 ವರ್ಷದ ವಿವಾಹಿತೆ ಮೇಲೆ ಅತ್ಯಾಚಾರ ನಡೆದಿದೆ.ಅತ್ಯಾಚಾರಿ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಿದ್ದಾನೆ.ಮೂರು ತಿಂಗಳ ಚಿತ್ರಹಿಂಸೆ ನಂತ್ರ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ. ಅಲ್ವಾರ್ ಜಿಲ್ಲೆಯ ರಾಣಿ ಪೊಲೀಸ್ ಠಾಣೆಯಲ್ಲಿ 32 ವರ್ಷದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಕಾನ್ಸ್ಟೇಬಲ್ ಸಂಜಯ್ ಕುಮಾರ್ ವಿಚಾರಣೆ ನಡೆಯುತ್ತಿದೆ.
ಅತ್ಯಾಚಾರದ ವಿಡಿಯೋ ಮಾಡಿ ಬೆದರಿಕೆ ಹಾಕ್ತಿದ್ದ ವಿಷ್ಯವನ್ನು ಮಹಿಳೆ ಪತಿಗೆ ತಿಳಿಸಿದ್ದಾಳೆ. ನಂತ್ರ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರುವ ನಿರ್ಧಾರಕ್ಕೆ ಬಂದಿದ್ದಾರೆ. ವಿಷ್ಯ ತಿಳಿಸಿದ್ರೆ ವಿಡಿಯೋ ವೈರಲ್ ಮಾಡುವುದಾಗಿ ಮಹಿಳೆಗೆ ಬೆದರಿಸಿದ್ದ ಎನ್ನಲಾಗಿದೆ.