ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ನಾನಾ ಪ್ರಯತ್ನ ನಡೆಯುತ್ತಿದೆ. ಲಾಕ್ ಡೌನ್ ನಂತ್ರ ಅನ್ಲಾಕ್ ಜಾರಿಯಾಗಿದೆ. ಆದ್ರೆ ಶಾಲೆಗಳು ಮಾತ್ರ ಇನ್ನೂ ಶುರುವಾಗಿಲ್ಲ. ಕೆಲ ಶಾಲೆಗಳು ಆನ್ಲೈನ್ ನಲ್ಲಿ ಶಿಕ್ಷಣ ನೀಡ್ತಿವೆ. ಶಾಲೆಯಿಲ್ಲದ ಕಾರಣ ಮಕ್ಕಳು 5 ತಿಂಗಳಿಂದ ಮನೆಯಲ್ಲಿದ್ದಾರೆ. ಮಕ್ಕಳ ಕಾಟಕ್ಕೆ ಬೇಸತ್ತ ಪಾಲಕರು ಶಾಲೆ ಆರಂಭವಾದ್ರೆ ಸಾಕು ಎನ್ನುತ್ತಿದ್ದಾರೆ. ಆದ್ರೆ ಮಕ್ಕಳು ಮಾತ್ರ ಶಾಲೆ ಶುರುವಾಗದಿರಲಿ ಎನ್ನುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಾಲಕ ಬಿಕ್ಕಿಬಿಕ್ಕಿ ಅಳ್ತಿದ್ದಾನೆ. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ್ ಮಾಯಾರಾಮ್ ಪೋಸ್ಟ್ ಮಾಡಿದ್ದಾರೆ. ‘ಈಗ ಏನು ಮಾಡಬೇಕು …’ ಎಂಬ ಶೀರ್ಷಿಕೆ ಹಾಕಿದ್ದಾರೆ. ಶಾಲೆಗಳು ಪುನಃ ತೆರೆದ್ರೆ ಎಂಬ ಭಯಕ್ಕೆ ಬಾಲಕ ಅಳ್ತಿದ್ದಾನೆ.
ಬನ್ನಿ, ಕೈ ಎತ್ತಿ ಅಲ್ಲಾನನ್ನು ಪ್ರಾರ್ಥಿಸಿ. ಆಗಸ್ಟ್ 15ರ ನಂತ್ರ ಶಾಲೆ ಶುರುವಾಗ್ಲಿ ಎಂದು ಬೇಡಿಕೊಳ್ಳಿ ಎಂದು ವಿಡಿಯೋದಲ್ಲಿ ತಾಯಿ ಹೇಳ್ತಾಳೆ. ಇದನ್ನು ಕೇಳ್ತಿದ್ದಂತೆ ಬಾಲಕ ಬಿಕ್ಕಿ-ಬಿಕ್ಕಿ ಅಳಲು ಶುರು ಮಾಡ್ತಾನೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.
ಆಗಸ್ಟ್ 10ರಂದು ಪೋಸ್ಟ್ ಆಗಿರುವ ಈ ವಿಡಿಯೋವನ್ನು ಈವರೆಗೆ 60 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.