ಡಿಜಿಟಲ್ ಯುಗದ ಈ ಕಾಲದಲ್ಲಿ ಸುಮ್ಮನೇ ಏನು ಬೇಕಾದರೂ ಮಾಡಿಕೊಂಡು ಸುದ್ದಿ ಮಾಡುವುದು ಬಲೇ ಸುಲಭ ಆಗಿಬಿಟ್ಟಿದೆ. ಯೂಟ್ಯೂಬರ್ ಒಬ್ಬ ಸುಮ್ಮನೇ ಏನೂ ಮಾಡದೇ, ಎರಡು ಗಂಟೆಗಳ ಕಾಲ ಕ್ಯಾಮೆರಾವನ್ನೇ ದಿಟ್ಟಿಸಿ ನೋಡಿಕೊಂಡು, ಆ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.
’2 ಗಂಟೆಗಳವರೆಗೂ ಏನೂ ಮಾಡದೇ ಇರುವುದು’ ಎಂಬರ್ಥದ ಹೆಸರಿನ ಈ ವಿಡಿಯೋವನ್ನು ಇಂಡೋನೇಷ್ಯಾದ ಯೂಟ್ಯೂಬರ್ ಮಹಮ್ಮದ್ ದಿದಿತ್ ಪೋಸ್ಟ್ ಮಾಡಿದ್ದಾರೆ.
ಇಂಥ ವಿಚಿತ್ರ ವಿಡಿಯೋವನ್ನೂ ಸಹ 1.7 ದಶಲಕ್ಷ ಬಾರಿ ನೋಡಲಾಗಿದೆ…! ಕೆಲವರು ಆತ ಧ್ಯಾನಾಸಕ್ತನಾಗಿದ್ದಾನೆ ಎಂದೂ ಸಹ ಹೇಳಿ ಕಾಮೆಂಟ್ ಹಾಕಿದ್ದಾರೆ.
https://www.youtube.com/watch?time_continue=7&v=x8zFL-0rBAw&feature=emb_logo