ಪರೋಟ, ಚಪಾತಿ, ರೋಟಿ ಮಾಡಿದಾಗ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಸ್ವೀಟ್ ಕಾರ್ನ್ ನಿಂದ ಮಾಡಬಹುದಾದ ರುಚಿಕರವಾದ ಗ್ರೇವಿ ಇದೆ. ಇದು ಜೀರಾ ರೈಸ್, ಗೀ ರೈಸ್ ಗೂ ಒಳ್ಳೆಯ ಕಾಂಬಿನೇಷನ್.
ಬೇಕಾಗುವ ಸಾಮಗ್ರಿಗಳು:
ಈರುಳ್ಳಿ ಪೇಸ್ಟ್ – 3/4 ಕಪ್, 1 ಇಂಚು ಶುಂಠಿ, 3 ಬೆಳ್ಳುಳ್ಳಿ ಎಸಳು, 1 ಹಸಿಮೆಣಸು ಸೇರಿಸಿ ಮಾಡಿದ ಪೇಸ್ಟ್ – 1 ಟೀ ಸ್ಪೂನ್, ಟೊಮೆಟೊ ಪೇಸ್ಟ್ – 3/4 ಕಪ್, ಬೇಯಿಸಿದ ಸ್ವೀಟ್ ಕಾರ್ನ್ ಕಾಳು – 1 ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 2 ಟೇಬಲ್ ಸ್ಪೂನ್, ಜೀರಿಗೆ – 1 ಟೀ ಸ್ಪೂನ್, ಪಲಾವ್ ಎಲೆ – 1, ಕೊತ್ತಂಬರಿ ಸೊಪ್ಪು – 3 ಟೇಬಲ್ ಸ್ಪೂನ್, ಅರಿಶಿನಪುಡಿ – 1/4 ಟೀ ಸ್ಪೂನ್, ಖಾರದ ಪುಡಿ – 3/4 ಟೀ ಸ್ಪೂನ್, ಧನಿಯಾ ಪುಡಿ – 1 ಟೀ ಸ್ಪೂನ್, ಗರಂ ಮಸಾಲ – 1/2 ಟೀ ಸ್ಪೂನ್.
ಮಾಡುವ ವಿಧಾನ:
ಮೊದಲಿಗೆ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿಯಾಗುತ್ತಲೆ ಜೀರಿಗೆ, ಪಲಾವ್ ಎಲೆ ಹಾಕಿ. ನಂತರ ಇದಕ್ಕೆ ಈರುಳ್ಳಿ ಪೇಸ್ಟ್ ಸೇರಿಸಿ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಇದರ ಹಸಿವಾಸನೆ ಹೋದ ನಂತರ ಇದಕ್ಕೆ ಮಾಡಿಟ್ಟುಕೊಂಡ ಶುಂಠಿ ಪೇಸ್ಟ್ ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ ನಂತರ ಟೊಮೆಟೊ ಪೇಸ್ಟ್ ಹಾಕಿ ಅರಿಶಿನ, ಖಾರದಪುಡಿ, ಧನಿಯಾ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಇದಕ್ಕೆ ಬೇಯಿಸಿಟ್ಟುಕೊಂಡ ಸ್ವೀಟ್ ಕಾರ್ನ್ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ 1 ಕಪ್ ನೀರು ಹಾಕಿ, ಗರಂ ಮಸಾಲ ಸೇರಿಸಿ ಚೆನ್ನಾಗಿ ಕುದಿಸಿಕೊಳ್ಳಿ. ಗ್ರೇವಿ ಹದಕ್ಕೆ ಬರುವವರಗೆ ಇದು ಸಣ್ಣ ಉರಿಯಲ್ಲಿ ಕುದಿಯಲಿ. ನಂತರ ಗ್ಯಾಸ್ ಆಫ್ ಮಾಡಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಸ್ವೀಟ್ ಕಾರ್ನ್ ಗ್ರೇವಿ ಸವಿಯಲು ಸಿದ್ಧ.