ಮಲೇಷಿಯಾ: ಸುಲಭ ಅಡುಗೆ ವಿಧಾನಗಳಿಗೆ ಹೆಸರಾದ ಮಲೇಷಿಯಾದ ಯು ಟ್ಯೂಬ್ ಚಾನಲ್ ನಿರ್ಮಾತೃಗಳಾದ ಸಗು ಪವಿತ್ರಾ ಈಗ ಒಂದು ವಾರದಲ್ಲಿ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.
ಎಂ. ಸಗು ಅವರು ಪತ್ನಿ ಎಸ್. ಪವಿತ್ರಾ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದು, ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಘಟನೆಯ ನಂತರ ಎಂ. ಸಗು ತಮ್ಮ ಚಾನಲ್ ನ ಎಲ್ಲ 98 ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾರೆ.
ಸಗು ಒಬ್ಬ ಎಸ್ಟೇಟ್ ಕೆಲಸಗಾರರಾಗಿದ್ದು, ಕಳೆದ ವರ್ಷ ಅದನ್ನು ಬಿಟ್ಟು ಯೂಟ್ಯೂಬ್ ಚಾನಲ್ ಪ್ರಾರಂಭಿಸಿದ್ದ. ರುಚಿಯಾದ ತಿಂಡಿ ಮಾಡುವ ವಿಧಾನಗಳ ಕುರಿತು ಸಗು ಮತ್ತು ಆತನ ಪತ್ನಿ ಪವಿತ್ರಾ ಜಂಟಿಯಾಗಿ ವಿವರಿಸುತ್ತಿದ್ದರು. ದಂಪತಿಯ ಕುಕ್ರಿ ಚಾನಲ್ ಗೆ 7.8 ಲಕ್ಷ ಸಬ್ಸ್ಸಕ್ರೈಬರ್ ಇದ್ದರು.
ದಂಪತಿಯ ನಡುವೆ ವಿರಸ ಉಂಟಾಗಿದ್ದು, ಜು. 24 ರಂದು ಸಗು ಕುಡಿದು ಬಂದು ಆಸ್ಪತ್ರೆಯೊಂದರ ಪಾರ್ಕಿಂಗ್ ಲಾಟ್ ನಲ್ಲಿ ಪತ್ನಿ ಪವಿತ್ರಾ ಮೇಲೆ 26 ಇಂಚ್ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಆದರೆ ತಪ್ಪಿಗೆ ಪಶ್ಚಾತ್ತಾಪ ಪಡಲು ಸಗು ಸಿದ್ಧನಿಲ್ಲ. ಪ್ರಕರಣ ವಾಪಸ್ ಪಡೆಯುವುದಾಗಿ ಪವಿತ್ರಾ ಹೇಳಿದ್ದಾರೆ. ಇದನ್ನು ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಇಷ್ಟಾದರೂ ಪ್ರತಿಕ್ರಿಯೆ ನೀಡಿರುವ ಸಗು, “ನನಗೆ ದುಡಿದು ತಿನ್ನಲು ಕೈ ಕಾಲು ಗಟ್ಟಿ ಇದೆ. ಬೇರೆ ಏನಾದರೂ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾನೆ. ಅಲ್ಲದೆ, ಚಾನೆಲ್ ನಲ್ಲಿರುವ ಎಲ್ಲ ವಿಡಿಯೋಗಳನ್ನು ಡಿಲಿಟ್ ಮಾಡಿದ್ದಾನೆ.