ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಆಗಸ್ಟ್ ವರೆಗೆ ಶೇಕಡಾ 24ರಷ್ಟು ಇಪಿಎಫ್ ನೆರವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ.
ಬುಧವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಈ ಇಪಿಎಫ್ ನೆರವು ಸಿಗ್ತಿದೆ.
100 ಉದ್ಯೋಗಿಗಳು ಇರುವ ಹಾಗೂ ಅದ್ರಲ್ಲಿ ಶೇಕಡಾ 90 ರಷ್ಟು ಉದ್ಯೋಗಿಗಳು ತಿಂಗಳಿಗೆ 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಸಂಬಳ ಗಳಿಸುತ್ತಿದ್ದರೆ ಅವ್ರಿಗೆ ಸರ್ಕಾರ ಇಪಿಎಫ್ ನೆರವು ನೀಡ್ತಿದೆ. ಆಗಸ್ಟ್ ವರೆಗೆ ಅಂತಹ ಕಂಪನಿಗಳು ಮತ್ತು ಅವರ ನೌಕರರ ಪರವಾಗಿ ಸರ್ಕಾರ ಇಪಿಎಫ್ ಕೊಡುಗೆ ನೀಡಲಿದೆ.