ರೇಷನ್ ಕಾರ್ಡ್ ಅನ್ನೋದು ದೇಶದ ಪ್ರತಿಯೊಬ್ಬ ಪ್ರಜೆಗೂ ಮುಖ್ಯವಾದದ್ದು ಎನ್ನೋದು ಗೊತ್ತಿರುವ ವಿಚಾರವೇ. ಒಂದು ಕಡೆ ಪಡಿತರ ಕೊಡ್ತಾರೆ ಅನ್ನೋದಾದರೆ, ಮತ್ತೊಂದು ಕಡೆ ಬೇರೆ ಬೇರೆ ಕೆಲಸಕ್ಕೂ ಮುಖ್ಯವಾಗಿದೆ. ಹೀಗಾಗಿಯೇ ಇತ್ತೀಚೆಗೆ ಸರ್ಕಾರ ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ. ನಿಮ್ಮ ಬಳಿ ಪಡಿತರ ಚೀಟಿ ಇಲ್ಲ ಎಂದರೆ ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಇದನ್ನು ಪಡೆಯಬಹುದು.
ಹೌದು, ನೀವು 18 ವರ್ಷದವರಾಗಿದ್ದರೆ ರೇಷನ್ ಕಾರ್ಡ್ ಪಡೆಯಬಹುದಾಗಿದೆ. ನೀವು ನಿಮ್ಮ ರಾಜ್ಯದ ಅಧಿಕೃತ ಸೈಟ್ ಗೆ ಭೇಟಿ ನೀಡಿ ಅಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಇರುವ ರೂಲ್ಸ್ ಫಾಲೋ ಮಾಡಿ. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮೊದಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್ ಸೇರಿದಂತೆ ಯಾವುದಾದರೂ ಐಡಿ ನೀಡಬೇಕು. ಇಷ್ಟು ದಾಖಲೆ ಇಲ್ಲ ಎಂದರೆ. ಸರ್ಕಾರ ನೀಡುವ ಯಾವುದೇ ಐಡಿ ಕಾರ್ಡ್, ಹೆಲ್ತ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ನೀಡಬಹುದು. ಹಾಗೆಯೇ ಅನ್ ಲೈನ್ ಮೂಲಕ ಕೇಳಿರುವ ಶುಲ್ಕವನ್ನು ಪಾವತಿಸಿ.
ಇದಾದ ನಂತರ 30 ದಿನಗಳ ಒಳಗೆ ಪರಿಶೀಲನೆ ನಡೆದು ನೀಡಿದ್ದ ಮಾಹಿತಿ ಹಾಗೂ ದಾಖಲೆಗಳು ಸರಿಯಾಗಿವೆ ಎಂದು ತಿಳಿದ ನಂತರ ನಿಮಗೆ ರೇಷನ್ ಕಾರ್ಡ್ ಸಿಗುತ್ತದೆ. ಇನ್ನು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಆಗಲಿಲ್ಲ ಎಂದರೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಸಬಹುದು.