ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ವೈರಸ್ ತನ್ನ ಬಾಹುಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ.
ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ಪಾಸಿಟಿವ್ ಕೇಸ್ ಗಳು ಬೆಂಗಳೂರಿನಲ್ಲಿ ಧೃಡಪಟ್ಟಿವೆ. ಸೋಂಕು ಹೆಚ್ಚಾಗುವುದನ್ನು ತಡೆಯೋದಕ್ಕೆ ಭಾನುವಾರ ಲಾಕ್ ಡೌನ್ ತಂತ್ರ ರೂಪಿಸಲಾಗಿದೆ. ಇದೀಗ ಕೊರೊನಾ ಎಫೆಕ್ಟ್ ಫ್ಲವರ್ ಶೋಗೂ ತಟ್ಟಿದೆ.
ಹೌದು, ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವ ಫಲಪುಷ್ಟ ಪ್ರದರ್ಶನ ಈ ಬಾರಿ ರದ್ದಾಗಲಿದೆ. ವರ್ಷಕ್ಕೆ ಎರಡು ಬಾರಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಯುತ್ತಿತ್ತು. ಆದರೆ ಈ ಬಾರಿ ಆಗಷ್ಟ್ ನಲ್ಲಿ ನಡೆಯಬೇಕಿದ್ದ ಫ್ಲವರ್ ಶೋವನ್ನು ರದ್ದು ಮಾಡಲು ತೋಟಗಾರಿಕಾ ಇಲಾಖೆ ನಿರ್ಧಾರ ಮಾಡಿದೆ.
ಫ್ಲವರ್ ಶೋಗೆ ಲಕ್ಷಾಂತರ ಮಂದಿ ಲಾಲ್ ಬಾಗ್ ಗೆ ಬರುತ್ತಾರೆ. ಇದರಿಂದ ಸೋಂಕು ಹೆಚ್ಚಾಗಬಹುದು ಎಂಬ ಕಾರಣಕ್ಕಾಗಿ ಈ ಬಾರಿಯ ಫ್ಲವರ್ ಶೋ ವನ್ನು ರದ್ದು ಪಡಿಸಲಾಗುತ್ತಿದೆ. ಇನ್ನು ಈ ಬಾರಿ ಯಾವ ಥೀಮ್ ಅನ್ನೋದು ಇನ್ನು ನಿರ್ಧಾರ ಮಾಡಿಲ್ಲವಂತೆ.