ಜಪಾನ್ ನ ಸೋನಿ ಕಂಪನಿಯು ತನ್ನ ಪ್ಲೇ ಸ್ಟೇಷನ್ 4 ನ ಸಾಫ್ಟ್ ವೇರ್ ನಲ್ಲಿ ದೋಷ ಕಂಡು ಹಿಡಿದುಕೊಟ್ಟವರಿಗೆ 50 ಸಾವಿರ ಡಾಲರ್ ಅಂದರೆ 38 ಲಕ್ಷ ರೂ. ಉಡುಗೊರೆ ನೀಡುವುದಾಗಿ ಘೋಷಿಸಿದೆ.
ಸಾಕಷ್ಟು ವಿಡಿಯೋ ಗೇಮ್ ಗಳ ಪ್ಯಾಕೇಜ್ ಒಳಗೊಂಡಿರುವ ಪ್ಲೇ ಸ್ಟೇಷನ್ 4 ಗ್ರಾಹಕರಿಗೆ ಮನರಂಜನೆ ನೀಡುತ್ತಾ ಬಂದಿದೆ.
ಈ ಗೇಮ್ ಗಳ ಸಾಫ್ಟ್ ವೇರ್ ಸೇರಿದಂತೆ ಯಾವುದೇ ಹಂತದ ಡೆವಲಪ್ಮೆಂಟ್ ನಲ್ಲೂ ಲೋಪ ಕಂಡು ಹಿಡಿದುಕೊಟ್ಟವರಿಗೆ ಈ ಕೊಡುಗೆ ಸಿಗಲಿದೆ.
ಸಾಫ್ಟ್ ವೇರ್ ಸುರಕ್ಷತಾ ಸಂಶೋಧಕರು, ಗೇಮಿಂಗ್ ಸಂಶೋಧಕರು, ಗೇಮರ್ಸ್ ಯಾರು ಬೇಕಿದ್ದರೂ ಪ್ರಯತ್ನ ನಡೆಸಬಹುದು ಎಂದು ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರಿಂಗ್ ನಿರ್ದೇಶಕ ಜೆಫ್ ನಾರ್ಟನ್ ತಿಳಿಸಿದ್ದಾರೆ.