ಸಂಗೀತದ ಸ್ವರಗಳಿರುವ ಮಾಂತ್ರಿಕ ಶಕ್ತಿಯೇ ಅಂಥದ್ದು. ಎಂಥವರನ್ನೂ ಸಮ್ಮೋಹಿತಗೊಳಿಸಿಬಿಡುತ್ತದೆ.
ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದುಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾಕಾರಗಳಿಗೆ ಉನ್ನತ ಸ್ಥಾನವಿದೆ. ಅಂತೆಯೇ ಪಾಶ್ಚಾತ್ಯ ಸಂಗೀತದಲ್ಲಿ ಮೊಸರ್ಟ್ ಶೈಲಿಯ ಸಂಗೀತವೂ ಅಷ್ಟೇ ಮಹತ್ವದ್ದು.
ಭಾರತೀಯ ಸಂಗೀತದ ಸ್ವರಗಳನ್ನು ಡಬ್ಲ್ಯು.ಎ. ಮೊಸರ್ಟ್ ನ ಸಂಗೀತ ಶೈಲಿಯೊಂದಿಗೆ ಸಂಯೋಜಿಸಿ, ಆರೋಹಣ – ಅವರೋಹಣ ಮಾಡುವ ಮೂಲಕ ರಚಿಸಿರುವ ಸಮ್ಮಿಳಿತ ಸ್ವರಮೇಳ (ಫ್ಯುಶನ್ ಸಿಂಫೋನಿ) ವೈರಲ್ ಆಗಿದೆ.
ಸಮದೀಪ್ತ ಮುಖರ್ಜಿ ಎಂಬ ಸಂಗೀತಕಾರರು ಸ್ವರಸಂಯೋಜಿಸಿರುವ ಪರಿಗೆ ಕೇಳುಗರು ಫಿದಾ ಆಗಿದ್ದಾರೆ. ಸ್ವರಸುತ್ತುಗಳನ್ನು ಕೇಳಿ ಭೇಷ್ ಎಂದಿದ್ದಾರೆ. ನೀವೂ ಈ ಸಮದೀಪ್ತ ಎಂಬ ಸ್ವರಸರಸ್ವತಿಯ ಸ್ವರಸುತ್ತಿನಲ್ಲೊಮ್ಮೆ ಸುತ್ತಾಡಿ ಬನ್ನಿ. ಸುಸ್ತೆಲ್ಲ ಮಾಯವಾಗಿ, ಚೇತೋಹಾರಿ ಆಗುವಿರಿ.