ನಿಮಗೆ ಟಿವಿ ನೋಡುವ ಅಭ್ಯಾಸ ಇದೆಯೇ ? ಇಂಗ್ಲಿಷ್ ಮಾತನಾಡಲು ಹಾಗೂ ಬರೆಯಲು ಬರುತ್ತದೆಯೇ ?
ಇಷ್ಟಿದ್ದರೆ ಸಾಕು ಬಿಡಿ, 20 ಗಂಟೆಗಳ ಕಾಲ ಟಿವಿ ನೋಡುವುದಷ್ಟೇ ಸವಾಲು. ಗಂಟೆಗೆ 3281 ರೂ. ಮತ್ತು ವಾರಕ್ಕೆ 65 ಸಾವಿರ ರೂ. ಸಂಪಾದಿಸಬಹುದು. ತಿಂಗಳಿಗೆ 2.5 ಲಕ್ಷ ರೂ.ಗಳವರೆಗೆ ಹಣಕ್ಕೇನೂ ಮೋಸ ಇಲ್ಲ.
ಇಂಥದ್ದೊಂದು ಆಫರ್ ನೀಡಿರುವುದು ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆನ್ ಬೈ ಸಂಸ್ಥೆ.
ಎಲೆಕ್ಟ್ರಾನಿಕ್ ಉಪಕರಣಗಳಿಗೆ ಸಂಬಂಧಿಸಿದಂತೆ ಬಳಕೆದಾರರಿಂದ ಅಭಿಪ್ರಾಯ ಸಂಗ್ರಹಿಸಿ, ಗ್ರಾಹಕರ ಬೇಡಿಕೆಗೆ ತಕ್ಕಂತೆ ಉಪಕರಣಗಳ ತಯಾರಿ ಮತ್ತು ಪೂರೈಕೆಗೆ ಈ ಮೊರೆ ಹೋಗಿದೆ.
ಸದ್ಯಕ್ಕೀಗ ಟಿವಿ ಬಳಕೆದಾರರನ್ನು ಟೆಕ್ ಟೆಸ್ಟರ್ ಎಂದು ಕರೆದಿದ್ದು, ಈ ಹುದ್ದೆಗಾಗಿ ದಿನದ ಒಂದು ಗಂಟೆ ಅಥವಾ ವಾರದಲ್ಲಿ 20 ಗಂಟೆಗಳ ಕಾಲ ಟಿವಿ ವೀಕ್ಷಣೆ ಮಾಡಬೇಕು. ಉಪಕರಣದ ವಿನ್ಯಾಸ, ಕಾರ್ಯದಕ್ಷತೆ, ಬಾಳಿಕೆ, ಶಬ್ದ ಎಲ್ಲದರ ಬಗ್ಗೆ 200 ಶಬ್ದಗಳಲ್ಲಿ ವಿವರಿಸಿ ವಿಶ್ಲೇಷಿಸಬೇಕು. ಕೊನೆಗೆ ಆ ಉಪಕರಣಕ್ಕೆ ಎಷ್ಟು ಬೆಲೆ ಕಟ್ಟಬಹುದು ಎಂಬ ಅಭಿಪ್ರಾಯವನ್ನೂ ಟೆಕ್ ಟೆಸ್ಟರ್ ನೀಡಬಹುದು.