ಟೀ ಮರದ ಎಣ್ಣೆಯನ್ನು ಸಾಮಾನ್ಯವಾಗಿ ಶಾಂಪೂ, ಫೇಸ್ ವಾಶ್ ಮತ್ತು ಲೋಶನ್ ಉತ್ಪಾದನೆಯಲ್ಲಿ ಬಳಸುತ್ತಾರೆ. ಇದರ ಉಪಯೋಗದಿಂದ ಮೊಡವೆ, ಕೂದಲು ಉದುರುವುದು ಮುಂತಾದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಟೀ ಎಣ್ಣೆಯ ಅಂತಹ ಕೆಲವು ಉಪಯೋಗಕಾರಿ ಗುಣಗಳು ಇಲ್ಲಿವೆ.
ಪ್ರತಿ ದಿನ ರಾತ್ರಿ ಮಲಗುವ ಮುನ್ನ ಟೀ ಮರದ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡು ಮಾರನೇ ದಿನ ಬೆಳಿಗ್ಗೆ ತಲೆ ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.
ಚರ್ಮದಲ್ಲಿ ಯಾವುದೇ ರೀತಿಯ ತುರಿಕೆ ಅಥವಾ ಗುಳ್ಳೆಗಳಾದಲ್ಲಿ ತೆಂಗಿನ ಎಣ್ಣೆ ಮತ್ತು ಟೀ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಹಚ್ಚಬೇಕು.
ಡ್ರೈ ಸ್ಕಿನ್ ಸಮಸ್ಯೆಯಿಂದ ಬಳಲುತ್ತಿರುವವರು ಸ್ನಾನ ಮಾಡುವ ಮೊದಲು ಟೀ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡಿಕೊಳ್ಳುವುದರಿಂದ ಡ್ರೈ ಸ್ಕಿನ್ ಸಮಸ್ಯೆ ದೂರವಾಗಿ ಚರ್ಮ ಮೃದುವಾಗುತ್ತದೆ.
ತಲೆಯ ಹೊಟ್ಟಿಗೂ ಟೀ ಟ್ರೀ ಆಯಿಲ್ ದಿವ್ಯೌಷಧ. ತಲೆ ಸ್ನಾನ ಮಾಡುವಾಗ ಶಾಂಪೂವಿನ ಜೊತೆ ಟೀ ಮರದ ಎಣ್ಣೆಯನ್ನು ಬೆರೆಸಿ ಸ್ನಾನ ಮಾಡುವುದರಿಂದ ಹೊಟ್ಟು ಮತ್ತು ಹೇನಿನ ಸಮಸ್ಯೆ ದೂರವಾಗುತ್ತದೆ.
ಟೀ ಟ್ರೀ ಆಯಿಲ್ 2-3 ಬಿಂದುವಿನೊಂದಿಗೆ ಜೇನುತುಪ್ಪ ಮತ್ತು ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ಮಾಯವಾಗುತ್ತವೆ.
ತುಟಿಗಳು ಸೀಳಿಕೊಂಡಿದ್ದಲ್ಲಿ ಲಿಪ್ ಬಾಮ್ ನೊಂದಿಗೆ ಟೀ ಟ್ರೀ ಆಯಿಲ್ ಅನ್ನು ಹಚ್ಚುವುದರಿಂದ ಒಡೆದ ತುಟಿಗಳು ಗುಣಹೊಂದುತ್ತವೆ.