ಯಾವುದೇ ಪದಾರ್ಥಕ್ಕಾದರೂ ಚಿಟಿಕೆ ಗರಂ ಮಸಾಲ ಬಿದ್ದರೆ ಅದರ ಪರಿಮಳವೇ ಬೇರೆ. ಹೊರಗಡೆ ತರುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
½ ಕಪ್ ಜೀರಿಗೆ, ¼ ಕಪ್ – ಧನಿಯಾ, ¼ ಕಪ್ – ಮೆಂತೆ, 2 ಟೇಬಲ್ ಸ್ಪೂನ್ – ಶಾ ಜೀರಾ, 2 ಟೇಬಲ್ ಸ್ಪೂನ್, ಜಾಪತ್ರೆ – 10, 7 ಗ್ರಾಂ – ಚಕ್ಕೆ, 2 ಟೇಬಲ್ ಸ್ಪೂನ್ – ಲವಂಗ, 10 – ಪಲಾವ್ ಎಲೆ, 10 – ಕಪ್ಪು ಏಲಕ್ಕಿ, 2 ಟೇಬಲ್ ಸ್ಪೂನ್ – ಸಣ್ಣ ಏಲಕ್ಕಿ, 1 – ಜಾಯಿಕಾಯಿ, 1.5 ಟೇಬಲ್ ಸ್ಪೂನ್ – ಕರಿಮೆಣಸು, 1 ಪೀಸ್ – ಒಣ ಶುಂಠಿ.
ಮಾಡುವ ವಿಧಾನ:
ಮೊದಲಿಗೆ ಈ ಎಲ್ಲಾ ಸಾಮಾಗ್ರಿಗಳನ್ನು ಒಂದು ಅಗಲವಾದ ತಟ್ಟೆಗೆ ಹಾಕಿ 3 ದಿನಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತರ ಒಂದು ಮಿಕ್ಸಿ ಜಾರಿಗೆ ಮೊದಲು ಒಣ ಶುಂಠಿ ಹಾಕಿ ಪುಡಿಮಾಡಿಕೊಳ್ಳಿ.
ನಂತರ ಜಾಯಿಕಾಯಿ ಹಾಗೂ ಚಕ್ಕೆಯನ್ನು ಸೇರಿಸಿ ನಯವಾಗಿ ಪುಡಿ ಮಾಡಿಕೊಂಡು ನಂತರ ಉಳಿದ ಸಾಮಾಗ್ರಿಗಳನ್ನು ಸೇರಿಸಿ ಪುಡಿ ಮಾಡಿ ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟುಕೊಳ್ಳಿ.