alex Certify ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ ಈಕೆ ಚಹಾ ಮಾಡುವ ವಿಧಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ ಈಕೆ ಚಹಾ ಮಾಡುವ ವಿಧಾನ…!

ಇಂಗ್ಲೆಂಡ್: ಒಂದು ಕಪ್ ಬಿಸಿ ಪೇಯ, ಬಿಸಿಯಾದ ಅಪ್ಪುಗೆ ಹಲವರ ದಿನವನ್ನು ಉಲ್ಲಸಿತಗೊಳಿಸುತ್ತದೆ. ಪೇಯದಲ್ಲಿ ಚಹಾ ಶ್ರೇಷ್ಠವೋ ಕಾಫಿಯೋ ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಎರಡೂ ತನ್ನದೇ ಆದ ಸ್ವಾದ ಹೊಂದಿದೆ ಎಂಬುದು‌ ನಿರ್ವಿವಾದ.

ಇಂಗ್ಲೆಂಡ್ ನಲ್ಲಿರುವ ಅಮೇರಿಕಾ ಮೂಲದ ಯುವತಿಯೊಬ್ಬಳು ಹೊಸ ರೀತಿಯ ಚಹಾ ಮಾಡುವ ವಿಧಾನವನ್ನು ಟಿಕ್ ಟಾಕ್ ನಲ್ಲಿ ಅಪ್‌ಲೋಡ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.‌ ಅಚ್ಚರಿ ಎಂದರೆ ಆಕೆ ಹಾಲನ್ನು ಬಳಸುವುದೇ ಇಲ್ಲ.

35 ಸೆಕೆಂಡ್ ಗಳ ವಿಡಿಯೋ ಇದಾಗಿದ್ದು, ಮೈಕೆಲ್ @jchelle 36 ಎಂಬ ಪ್ರಸಿದ್ಧ ವಿಡಿಯೋ ಶೇರಿಂಗ್ ಆ್ಯಪ್ ಆಧರಿಸಿ ಯುವತಿ ವಿವರಣೆ ನೀಡುತ್ತಾಳೆ.

ಒಂದು ಕಪ್ ಚಹಾ ಪುಡಿಗೆ ಒಂದು ಕಪ್ ಟ್ಯಾಂಗ್ ಎಂಬ ಪಾನೀಯ ಪುಡಿ, ಇನ್ನೊಂದು ಕಪ್ ಕಂಟ್ರಿ ಟೈಮ್ ಲೆಮನ್ಡ್ ಎಂಬ ಮತ್ತೊಂದು ಪಾನೀಯ ಪುಡಿ, ಎರಡು ಕಪ್ ಸಕ್ಕರೆ ಸೇರಿಸಿ ಮಿಶ್ರಣ ಮಾಡಿ ಅದನ್ನು ಕೆಲ ಹೊತ್ತು ಓವೆನ್ ನಲ್ಲಿ ಇಡುತ್ತಾಳೆ. ನಂತರ ಅದಕ್ಕೆ ನೀರು ಸೇರಿಸಿ ಕಲಕಿ ಚಹಾ ಸಿದ್ಧ. ಮಾಡುತ್ತಾಳೆ. ವಿಡಿಯೋ ಟ್ವಿಟರ್ ನಲ್ಲೂ ಈಗ ಶೇರ್ ಆಗಿದ್ದು, ಸಾಕಷ್ಟು ವಿಭಿನ್ನ ಕಮೆಂಟ್ ಗಳು ಬಂದಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...